Wednesday, January 16, 2008

"priya-hanigavana"

ದುಂಡಿರಾಜ್ ಅವರ ಹನಿಗವನಗಳು

ಪ್ರಾಯ

ಹುಡುಗಿ ನಡೆದಾಗ
ನಡು ಆಹಾ!ಬಳಕುತ್ತದೆ.
ಮುದುಕಿನಡೆದರೆ
ಅಯ್ಯೋ!ಉಳುಕುತ್ತದೆ.

ಆ-ಶ್ರಮ
ಕಟ್ಟಾ ಬ್ರಹ್ಮಚಾರಿಯಾಗಿದ್ದವ
ಪ್ರಸ್ತದ ಮರುದಿನ
ಏದುಸಿರು ಬಿಡುತ್ತಹೇಳಿದ -
ಅಬ್ಬಾ! ಎಂಥಾ ಶ್ರಮಈ ಗ್ರಹಸ್ಥಾಶ್ರಮ.

ಕನ್ನಡಿ ಕನ್ನಡಿ

ಪಂಚಟಾರಾ
ಹೊಟೆಲ್ಲುಗಳಲ್ಲಿ
ಎಲ್ಲಿ ನೋಡಿದರಲ್ಲಿ
ಕನ್ನಡಿ ಕನ್ನಡಿ
ನನಗೆ ನೆನಪಾಗುವುದು
ಕ್ಷೋರಡಂಗಡಿ.....

ಅದೂ ಖ೦ಡನೆ

ಇದೂ ಖ೦ಡನೆ
ಏನು ಹೇಳಿದರೂ
ಖ೦ಡನೆ
ಓ ಗೆಳೆಯನೇ ,
ನೀನೇನು ವಿರೋಧ ಪಕ್ಷದ
ಮು-ಖ೦ಡನೆ....

ತುಟಿ ತೊಂದೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ.
.ಏಕೆಂದರೆ
ಣ್ಣು ಲವ್ ಹುಟ್ಟುವ ಅಂಗ.......

ಕ್ಯಾಷ್ ಕೌ೦ಟರಿನ
ಚೆಲುವೆಯತ್ತ ಹರಿದ ನೋಟ....
ಗಮನಿಸಲಿಲ್ಲ
ಅವಳು ಕೊಟ್ಟ ಹರಿದ ನೋಟ....

ತಾವರೆಯ ಏಸಲು

ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು.........

"ಕದ್ದಾಲಿಕೆ"
ಮ೦ತ್ರಿಯಾದರೆ ನಾನು
ಇನ್ನೋಬ್ಬರ ಫೋನು
ಕದ್ದು ಆಲಿಸಲು
ಅದೇಶಿಸುವುದಿಲ್ಲ
ನಾನೇ ಖುದ್ದು
ಆಲಿಸುತ್ತೇನೆ ... !