Sunday, May 18, 2008

Minchu

gelabeku gelati ni gelabeku
moha dahada baleyali beelade
badukina marma ni ariyabeku //
swartave tumbide ee jagadalli
tyagakke elide bele ninna preetiyalle
huttuva surya yochisodilla
muluguva chandra chintisodilla //
prakruti chakra nilodillaoduva
kaalava hidiyorilaaninta
neeralla ee baduku mareyalebeku ninna haleya nenapu //
ninna manada kanasugala maadu nanasu
ranichennama,jhansi rani lakshmibai,onake obbavarante neenagabeku ee jagada belaku //
chintisu mundina bhavishayada aagu hogugalayogisu ninna kanasu swapnagala//
jagadalli iruvaru sahasraaru janaru ninate iraaru avaraaru//
deeksheya todu ni ninna bhavishyada baalige
ninindaale saadya ninna badukige saartakate//
saayuva munna chennagi badukunakshatradante ni sada minugu//

Tuesday, April 29, 2008

Nudi Mathu..

ಆನೆಯು ಊಟ ಮಾಡುವಾಗ ಅದರ ತುತ್ತಿನಿಂದ ಒಂದು ಅಗಳು ಉದುರಿಬಿದ್ದರೆ ಅದಕ್ಕೆ ಏನೂ ನಷ್ಟವಿಲ್ಲ. ಅದರೆ, ಅದೊಂದು ಅಗುಳಿನಿಂದ ಇರುವೆಯೊಂದು ತನ್ನ ಇಡೀ ಸಂಸಾರದ ಹಸಿವೆಯನ್ನೇ ನೀಗಿಸಿಕೊಳ್ಳಬಲ್ಲದು. ಒಂದೊಂದು ತುತ್ತಿಗೂ ಕಷ್ಟಪಡುವ ಜನರು ದೇಶದಲ್ಲಿ ಲಕ್ಷಾಂತರ ಮಂದಿಯಿದ್ದಾರೆ. ಅದೇ ವೇಳೆ, ಒಂದೊಂದು ಊಟದಲ್ಲಿ ಹತ್ತಾರು ತುತ್ತುಗಳನ್ನು ಚೆಲ್ಲುವ ಮಂದಿಯೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಂಪರ್ಕವೇರ್ಪಟ್ಟರೆ ಹಸಿವಿನ ಸಮಸ್ಯೆಯೇ ಉದ್ಬವಿಸಲಾರದೆನೋ...

Monday, March 31, 2008

Nudi Mathu

ಕೌಟುಂಬಿಕ ಚಿಂತೆಗಳು ಹೆಚ್ಚಿದರೆ ಬುದ್ದಿವಂತರ ಬುದ್ದಿಯೂ ಕೂಡ ಕ್ರಮೇಣ ನಶಿಸಿಹೋಗುತ್ತದೆ. ವಸಂತ ಋತುವಿನ ಗಾಳಿ, ಬಿಸಿಲಿನ ಹೊಡೆತದಿಂದ ಶಿಶಿರಋತುವಿನ ಸೌಂದರ್ಯ ಹಾಳಾಗುವುದಿಲ್ಲವೆ, ಹಾಗೆ........ ಸಾಮಾನ್ಯರಾದ ನಾವು ಸಂಸಾರ ಚಕ್ರದಿಂದ ಪೂರ್ತಿ ಹೊರಬರಲು ಸಾದ್ಯವೇ ಇಲ್ಲ. ಅದರೂ ಅದರೊಂದಿಗೆ ಹೊಂದಾಣಿಕೆ ಮಾಡಿಕೊಂದು ಪ್ರತ್ಯೇಕ ಪ್ರತಿಭಾವಲಯವನ್ನು ಸೃಷ್ಟಿಸಿಕೊಳ್ಳಲು ಅಸಾದ್ಯವೇನೂ ಇಲ್ಲ. ಮನೆಯಲ್ಲಿದ್ದಾಗ ಮನೆ, ಕೆಲಸದಲ್ಲಿದ್ದಾಗ ಕೆಲಸವೆಂಬ ದೋರಣೆ ಬೆಳೆಸಿಕೊಂಡರೆ ಬೆಳವಣೆಗೆಗೆ ಯಾವ ಚ್ಯುತಿಯೂ ಇರುವುದಿಲ್ಲ

Saturday, March 22, 2008

......ಬಂದುಬಿಡು.......

ನೀ ಯಾರ ಕಣ್ಣಿಗೂ
ಬೀಳಬೇಡ......
ಎಲ್ಲರ ಕಣ್ಣುಗಳು
ನಿನ್ನ ಸೌಂದರ್ಯ ಕಂಡು
ಹೂವಂತೆ ಬಾಡಿ ಹೋಗುತದೆ.

ನೀ ಕಲೆಗಾರರತ್ರ
ಹೋಗಬೇಡ.....
ಕಲೆಗಾರರಲ್ಲ
ನಿನ್ನ ಸೌಂದರ್ಯವ ಕಂಡು
ಚಿತ್ರ ಬರೆಯಲು ಕಷ್ಟಪಡುತಾರೆ.
ನಾ ಎಲ್ಲಿಗೆತಾನೆಹೋಗಲಿ
ಎನ್ನುತಿರುವೆಯ....?
ಸುಮ್ನೆ ನನ್ನ ಬಲಿ ಬಂದುಬಿಡು.

Thursday, March 20, 2008

ನಗು-ಅಳು

ನಗು-ಅಳು
ಒಂದು ನಗುವು ಜೀವನವನ್ನು ರೂಪಿಸುತ್ತದೆ
ಒಂದು ಅಳುವು ಜೀವನವನ್ನು ಹಾಳುಮಾಡುತ್ತದೆ
ಬೇರೆಯವರನ್ನು ನಗಿಸುವುದು ತುಂಬಾ ಕಠಿಣ ಆದರೆ...
ಅಳಿಸುವುದು ತುಂಬಾ ಕಷ್ಟ
ನಗುವು ಮನವನ್ನು ಉಲ್ಲಾಸಗೊಳಿಸುತ್ತದೆ
ಅಳುವು ಮನವನ್ನು ಕಲಕುತ್ತದೆ,
ಕದಡುತ್ತದೆ ಇದನ್ನೆಲ್ಲ ಚತುರತೆ ಇಂದ ನಿಭಾಇಸುವುದೇ
ಜೀವನದ ಅರ್ಥ...

Nudi Mathu

ಕೆಟ್ಟವರಿಂದ ಮನಸ್ಸು ಕೆಡಿಸಿಕೊಂಡವರು ನಂತರದ ದಿನಗಳಲ್ಲಿ ಒಳ್ಳೇಯವರಿಂದಲ್ಲೂ ವಿಶ್ವಾಸ ಹೊಂದುವುದಿಲ್ಲ, ಬಿಸಿ ಹಾಲು ಕುಡಿಯುವಾಗ ಬಾಯಿ ಸುಟ್ಟುಕೊಂಡವರು ಮೊಸರನ್ನು ಕೂಡ ಆರಿಸಿ ಕುಡಿಯುತ್ತಾರಂತಲ್ಲ? ಮುಖ್ಯವಾಗಿ ಬೇಕಿರುವುದು ವಿವೇಚನೆ.. ಯಾವುದು ಸರಿ, ಯಾವುದು ತಪ್ಪು, ಯಾವುದು ಒಳ್ಳೇದು, ಯಾವುದು ಕೆಟ್ಟದ್ದೆಂಬ ವಿವೇಕವುಳ್ಳ ಮನುಷ್ಯ ಎಲ್ಲ ಪೂರ್ವಗ್ರಹಗಳಿಂದ ಮುಕ್ತನಾಗುತ್ತಾನಲ್ಲವೇ?

kanasu

ನಟ್ಟ ನಡುರಾತ್ರಿ ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುವ ಬದಲು .........
ಮನದೊಳಗೆ ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!