Thursday, March 20, 2008

ನಗು-ಅಳು

ನಗು-ಅಳು
ಒಂದು ನಗುವು ಜೀವನವನ್ನು ರೂಪಿಸುತ್ತದೆ
ಒಂದು ಅಳುವು ಜೀವನವನ್ನು ಹಾಳುಮಾಡುತ್ತದೆ
ಬೇರೆಯವರನ್ನು ನಗಿಸುವುದು ತುಂಬಾ ಕಠಿಣ ಆದರೆ...
ಅಳಿಸುವುದು ತುಂಬಾ ಕಷ್ಟ
ನಗುವು ಮನವನ್ನು ಉಲ್ಲಾಸಗೊಳಿಸುತ್ತದೆ
ಅಳುವು ಮನವನ್ನು ಕಲಕುತ್ತದೆ,
ಕದಡುತ್ತದೆ ಇದನ್ನೆಲ್ಲ ಚತುರತೆ ಇಂದ ನಿಭಾಇಸುವುದೇ
ಜೀವನದ ಅರ್ಥ...

Nudi Mathu

ಕೆಟ್ಟವರಿಂದ ಮನಸ್ಸು ಕೆಡಿಸಿಕೊಂಡವರು ನಂತರದ ದಿನಗಳಲ್ಲಿ ಒಳ್ಳೇಯವರಿಂದಲ್ಲೂ ವಿಶ್ವಾಸ ಹೊಂದುವುದಿಲ್ಲ, ಬಿಸಿ ಹಾಲು ಕುಡಿಯುವಾಗ ಬಾಯಿ ಸುಟ್ಟುಕೊಂಡವರು ಮೊಸರನ್ನು ಕೂಡ ಆರಿಸಿ ಕುಡಿಯುತ್ತಾರಂತಲ್ಲ? ಮುಖ್ಯವಾಗಿ ಬೇಕಿರುವುದು ವಿವೇಚನೆ.. ಯಾವುದು ಸರಿ, ಯಾವುದು ತಪ್ಪು, ಯಾವುದು ಒಳ್ಳೇದು, ಯಾವುದು ಕೆಟ್ಟದ್ದೆಂಬ ವಿವೇಕವುಳ್ಳ ಮನುಷ್ಯ ಎಲ್ಲ ಪೂರ್ವಗ್ರಹಗಳಿಂದ ಮುಕ್ತನಾಗುತ್ತಾನಲ್ಲವೇ?

kanasu

ನಟ್ಟ ನಡುರಾತ್ರಿ ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುವ ಬದಲು .........
ಮನದೊಳಗೆ ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!