Monday, March 31, 2008

Nudi Mathu

ಕೌಟುಂಬಿಕ ಚಿಂತೆಗಳು ಹೆಚ್ಚಿದರೆ ಬುದ್ದಿವಂತರ ಬುದ್ದಿಯೂ ಕೂಡ ಕ್ರಮೇಣ ನಶಿಸಿಹೋಗುತ್ತದೆ. ವಸಂತ ಋತುವಿನ ಗಾಳಿ, ಬಿಸಿಲಿನ ಹೊಡೆತದಿಂದ ಶಿಶಿರಋತುವಿನ ಸೌಂದರ್ಯ ಹಾಳಾಗುವುದಿಲ್ಲವೆ, ಹಾಗೆ........ ಸಾಮಾನ್ಯರಾದ ನಾವು ಸಂಸಾರ ಚಕ್ರದಿಂದ ಪೂರ್ತಿ ಹೊರಬರಲು ಸಾದ್ಯವೇ ಇಲ್ಲ. ಅದರೂ ಅದರೊಂದಿಗೆ ಹೊಂದಾಣಿಕೆ ಮಾಡಿಕೊಂದು ಪ್ರತ್ಯೇಕ ಪ್ರತಿಭಾವಲಯವನ್ನು ಸೃಷ್ಟಿಸಿಕೊಳ್ಳಲು ಅಸಾದ್ಯವೇನೂ ಇಲ್ಲ. ಮನೆಯಲ್ಲಿದ್ದಾಗ ಮನೆ, ಕೆಲಸದಲ್ಲಿದ್ದಾಗ ಕೆಲಸವೆಂಬ ದೋರಣೆ ಬೆಳೆಸಿಕೊಂಡರೆ ಬೆಳವಣೆಗೆಗೆ ಯಾವ ಚ್ಯುತಿಯೂ ಇರುವುದಿಲ್ಲ