Friday, February 22, 2008

Preethi...

ಒಮ್ಮೆ ಎಲ್ಲ ಭಾವನೆಗಳುಕಣ್ಣ ಮುಚ್ಚಾಲೆ ಆಡೋಕೆ ತೀರ್ಮಾನ ಮಾಡಿದವು,,
"ಹುಚ್ಚುತನ" ಎಣಿಸೋಕೆ ಶುರು ಮಾಡ್ತು..
ಎಲ್ಲವೂ ತಮಗೆ ಇಷ್ಟ ಬಂದ ಕಡೆ ಅವಿತುಕೊಂಡವು..
"ಸುಳ್ಳು" ಹೇಳಿತು ನಾ ಮರದ ಹಿಂದೆ ಅವಿತಿದ್ದಿನಿ ಅಂತ..
ಆದರೆ ಪ್ರೀತಿಗೆ ಅವಿತುಕೊಳ್ಳಲು ಎಲ್ಲೂ ಜಾಗ ಸಿಗಲೇ ಇಲ್ಲ..
ಕೊನೆಗೆ ಅದು ಗುಲಾಭಿಯ ಮುಳ್ಳಿನ ಪೊದೆಯಲ್ಲಿ ಅವಿತು ಕೊಂಡಿತು.
ಕೊನೆಯಲ್ಲಿ ಎಲ್ಲವೂ ಸಿಕ್ಕಿಹಾಕಿಕೊಂಡವು ..
"ಪ್ರೀತಿ "ಒಂದನ್ನು ಬಿಟ್ಟು,,ಆದರೆ "ಶತ್ರುತ್ವ"
"ಪ್ರೀತಿ" ಇರುವ ಜಾಗದ ಬಗ್ಗೆ ಹುಚ್ಚು ತಾಣಕ್ಕೆ ಹೇಳಿಯೇ ಬಿಟ್ಟಿತ್ತು..
"ಹುಚ್ಚುತನ" ಹಿಂದೆ ಮುಂದೆ ಯೋಚಿಸದೆ ಮುಳ್ಳಿನ ಪೋದೆಯೊಳಗೆ ನೆಗೆದೆ ಬಿಟ್ಟಿತು...
ಅದು ಪ್ರೀತಿಯನ್ನ ಹಿಡಿದು ಹೊರಗೆ ಬಂದಾಗ ಪ್ರೀತಿಯ ಕಣ್ಣಲ್ಲಿ ರಕ್ತವಿತ್ತು..
ಮುಳ್ಳುಗಳು ಕಣ್ಣನ್ನು ಹೊಕ್ಕಿದ್ದವು...
ಅಂದಿನಿಂದ "ಪ್ರೀತಿ"ಗೆ ಕಣ್ಣು ಇಲ್ಲ...
ನಾವೆಲ್ಲ "ಪ್ರೀತಿ" ಕುರುಡು ಅನ್ನೋದು ಅದಕೆ ಏನೋ????

***************

ವಾಸ್ತವ...
ನೆನಪುಗಳನ್ನೇ ಮೆಲುಕು ಹಾಕುತ್ತ
ಒಂದು ಕವನ ಲೆಕ್ಕಕಿರಲೆಂದುಗೀಚಿದ
ಹಾಳೆಯನ್ನೇ ನಿನ್ನ ಕೈಗಿತ್ತೆನೀನೋ,
ನಿನಗಾಗಿಯೇ ಬರೆದ, ನಿನ್ನದೇ ಕವನವೆಂಬಂತೆ
ಎದೆಗೊತ್ತಿಕೊಂಡು ಕಣ್ಮುಚ್ಚಿ ಒಮ್ಮೆ ನಿಟ್ಟುಸಿರುಗೈದೆ!
ಆ ನಿನ್ನ ಬಿಸಿಯುಸಿರು ನನಗೂ ತಟ್ಟಿ,
ಕಣ್ಣಂಚಿನಲ್ಲಿ ಕಾದು ಕುಳಿತ ಕಂಬನಿಯು
ನಿನ್ನಾ ಕೆನ್ನೆಯ ಸವರಿ,
ಗಲ್ಲದ ತುದಿಗೆ ಬರುವಷ್ಟರಲ್ಲಿ
ಸಪ್ತಸಾಗರದಾಚೆಗಿನ ಹೊಸ ಬದುಕಿನೆಡೆಗೆ
ನನ್ನ ಪಯಣ ಶುರುವಾಗಿತ್ತು!
-ಸುಸಂಕೃತ {ಸಂಗ್ರಹ}

Nudi Mathu

ಮಹಾತ್ಮರ ಗುಣಗಳನ್ನು ಲೋಕವೇ ಹೊಗಳುತ್ತದೆ....
ಅಲ್ಪನಾದವನು ತನ್ನ ಬಗ್ಗೆ ತಾನೆ ಹೇಳಿಕೊಳುತ್ತಾನೆ....