Friday, February 22, 2008

***************

ವಾಸ್ತವ...
ನೆನಪುಗಳನ್ನೇ ಮೆಲುಕು ಹಾಕುತ್ತ
ಒಂದು ಕವನ ಲೆಕ್ಕಕಿರಲೆಂದುಗೀಚಿದ
ಹಾಳೆಯನ್ನೇ ನಿನ್ನ ಕೈಗಿತ್ತೆನೀನೋ,
ನಿನಗಾಗಿಯೇ ಬರೆದ, ನಿನ್ನದೇ ಕವನವೆಂಬಂತೆ
ಎದೆಗೊತ್ತಿಕೊಂಡು ಕಣ್ಮುಚ್ಚಿ ಒಮ್ಮೆ ನಿಟ್ಟುಸಿರುಗೈದೆ!
ಆ ನಿನ್ನ ಬಿಸಿಯುಸಿರು ನನಗೂ ತಟ್ಟಿ,
ಕಣ್ಣಂಚಿನಲ್ಲಿ ಕಾದು ಕುಳಿತ ಕಂಬನಿಯು
ನಿನ್ನಾ ಕೆನ್ನೆಯ ಸವರಿ,
ಗಲ್ಲದ ತುದಿಗೆ ಬರುವಷ್ಟರಲ್ಲಿ
ಸಪ್ತಸಾಗರದಾಚೆಗಿನ ಹೊಸ ಬದುಕಿನೆಡೆಗೆ
ನನ್ನ ಪಯಣ ಶುರುವಾಗಿತ್ತು!
-ಸುಸಂಕೃತ {ಸಂಗ್ರಹ}

No comments: