Wednesday, March 12, 2008

Nudi Mathu

ನಿಮ್ಮನು ನೀವೆ ನಿಯಂತ್ರಿಸಿಕೊಳ್ಳಲು ತಲೆ ಉಪಯೋಗಿಸಿ....
ಬೇರೆಯವರನ್ನು ನಿಭಾಯಿಸಲು ಹೃದಯ ಬಳಸಿ....ಯಶಸ್ಸು ದೊರೆತಾಗ ತಲೆಗೆರಿಸಿಕೊಳ್ಳಬೇಡಿ....
ಸೋಲು ಉಂಟಾದಾಗ ಹೃದಯ ಕಳೆದುಕೊಲ್ಲಬೇಡಿ....

Nudi mathu

ಬೇರೆಯವರನ್ನು ನೋಯಿಸುವ ಸಂಗತಿಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ....
ಹಾಗೆಯೇ ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಬೇರೆಯವರನ್ನು ನೋಯಿಸಬೇಡಿ....

Nudi Mathu

ನಗುವುದರಿಂದ ಏನೇನೂ ಖರ್ಚಾಗದು....
ಖರ್ಚು ಮಾಡದೇ ಗಳಿಸಬಹುದಾದದ್ದು ನಗುವಿನಿಂದ ಮಾತ್ರ, ಅಂತ ಗಳಿಕೆ ನಿರಂತರವಾಗಿರಲಿ....

Nudi Mathu

ಅತಿಯಾಗಿ ಕಾಡಿಪೀಡಿಸಿದರೆ ಎಂತಹ ಶಾಂತ ಸ್ವಭಾವದವರಿಗೂ ಕೋಪ ಬರುತ್ತದೆ,
ತಂಪಿಗೆ ಹೆಸರಾದ ಗಂಧದ ಮರವನ್ನೂ ಕೂಡ ಹೆಚ್ಚೆಚ್ಚು ಮಥಿಸಿದರೆ ಅದರಲ್ಲೂ ಬೆಂಕಿ ಹುಟ್ಟುತ್ತದೆ......

Nudi Mathu

ಸ್ತ್ರೀಯು ದೇವತೆಯಂತೆ ಚಲಿಸುತ್ತಾಳೆ, ರಾಣೆಯಂತೆ ಕಾಣುತ್ತಾಳೆ, ಮೌನವೇ ಸ್ತ್ರೀಯರ ಕಿರೀಟ.....