Monday, February 4, 2008

ಜಗದಂಗಳದ
ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ

~*~*~*~*~

ನಿದ್ದೆ
ಬಾರದ ರಾತ್ರಿಯಲಿ
ಮನದ ಸೂರ ತುಂಬೆಲ್ಲಾ
ಧಗಧಗಿಸುವ ನಿನ್ನ ನೆನಪಮಳೆ ನಕ್ಷತ್ರಗಳು...!

~*~*~*~*~

ನೀನು ಸಿಗಲಿಲ್ಲವೆಂದು
ಬೇಸರಿಸಿದೆ, ದುಃಖಿಸಿದೆ,
ನಿನ್ನ ನೆನಪಲ್ಲೇ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!


ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿಕಣ್ಣಲ್ಲಿ
ಕಣ್ಣಿಟ್ಟುನೋಡ
ಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದುಅವಳಲ್ಲ...
ಸತ್ತ ಶಾಕುಂತಲೆ ಮತ್ತು ಶೂನ್ಯ.......

- ವಿಮೆ-
ಗೆಳತಿ ನಾ ನಿನ್ನ
ಹಗಲಿರುಳು ಪ್ರೀತಿಸಿ
ಕೊನೆಗೂ ಸೋತೆ
ಆದರೆ...
ನಾ ನಿನ್ನ ಪ್ರೀತಿಗಾಗಿ
ಮಾಡಿಸಿದ್ದರೆ ವಿಮೆ
ವಿಮೆಯ ಹಣದಿಂದ
ಗೆಲ್ಲುತಿರಬಹುದಿತ್ತು....(?)

ನೀ.....ನಾ *-
ನೀ ಲ್ಯಾಪ್ ಟಾಪ್
ಆದರೆನಾ ಕಂಪ್ಯೂಟ
ರ್ನೀ ಡಿ ವಿ ಡಿ ಯಾದರೆ
ನಾ ಆಡಿಯೊ ಕ್ಯಾಸೆಟ್ನೀ
ಲಾಸ್ ವೇಗಸ್ ಆದರೆ
ನಾ ಬಾಂಬೆ ಸಿಟಿ
ನೀ ಹುಣ್ಣಿಮೆಯ ಚಂದಿರ
ವಾದರೆನಾ ಅಮವಾಸ್ಯೆಯ ರಾತ್ರಿ........

ಅಮ್ಮ
ತಾ ಭ್ರೂಣದೊಳು,
ಸಾಕಿ ಬೆಳೆಸಿದೆ ನನ್ನ...
ಅಕ್ಕರೆಯಂ ತೋರಿ,
ಸಕ್ಕರೆಯ,ಸವಿ
ಪಾಕದೊಳಟ್ಟೆ ಎನ್ನ...!!

ನೋವು ನಲಿವುಗಳ ನುಂಗಿ,
ನನ್ನಧೀ ಶಿಶು ಎಂದು,
ಎದೆ ಹಾಲ ನೀ ಗೈದು,ಮುತ್ತಿನಾ..
ಮಳೆ ಸುರಿದು,ಸ್ವರ್ಗದ ಮಡಿಲೊಳಗಿಟ್ಟೆ ಎನ್ನ..!!
ಹೃದಯ ಮಂದಿರದೊಳು,..........

ಬಣ್ಣ.-.ಲಿಫ್ಸ್'ಗೆ
ಲಿಪ್ಸ ಟಿಕ್ ನ ಬಣ್ಣ
ಕೂದಲಿಗೆ ಹೇರ್ ಕಾಲರ್‍‍ನ
ಬಣ್ಣಮುಖ-ಮೈ‍ಗೆ ಕಾಸ್ಮಟಿಕ್‍ಗಳ
ಬಣ್ಣಎಲ್ಲದರಲ್ಲೂ ಬಣ್ಣವೇ
ಬಣ್ಣಹೆಣ್ಣೇ ನಿ ನಿನ್ನ ನಿಜವಾದ ಬಣ್ಣಮರೆತೆಯ......................?

No comments: