Thursday, February 14, 2008

VeErMaHiSuDeEp..

ಬಾಳು
ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯ ಸುಖಿ ನೀನೆನಲು ಒಪ್ಪೇನೆ ?
ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲ್ಲಿ ಚೆಲ್ಲಿ
ಸೂಸುವ ಅಮೃತ ನೀನೇನೆ ನನ್ನ
ಕನಸುಗಳಲ್ಲಿ ಕೈ ಗೊಳ್ಳುವ ಯಾತ್ರೆಯಲ್ಲಿ
ನಿದ್ದಿಸುವ ಧನ್ಯತೆಯ ನಿನೆನೆ ನಿನ್ನ
ಕಿರು ನಗೆಯಿಂದ ನುಡಿಯಿಂದ
ಎತ್ತರದ ಮನೆ ಚಿತ್ರಿಸಿದ್ದೆ ಚೆಳುವಿನುಳ
ಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೆ ....VeErMaHiSuDeEp..

ಸಣ್ಣ ಪ್ರಯತ್ನ..
ಮಿಡಿವ ಮನದ ಆಳ
ಅರಿತು ನಾ ಬರೆಯಬಲ್ಲೆನಾ?
ಮೌನ ವಹಿಸಿ ಕುಳಿತ
ಮನವೇ ಅದಕೇನು ಕಾರಣಾ?

ಬಾಳ ಬಂಡಿ ಎಳೆಯುವಾಗ
ಭಾವನೆಗಳ ಮರೆತೆ
ಮನದ ಬಂಧು,ಕೆಲವು
ಗಳಿಗೆ ಮಾತ್ರ ನಿಮಗೆ ಮಿಸಲಿತೆ..

ಕಾಲ ಕಳೆದು ದೂರ ನಡೆದು
ನಾ ಬಸವಳಿದು ಹೋದೆನು
ಮತ್ತೆ ನಿಮ್ಮ ತೆಕ್ಕೆಯ ಸವಿ
ನೆನೆದು ಮರುಗಿದೆನು
ನಿಲ್ಲಿ,ಎನ್ನ ತೂರೆದು ಹೂಗದಿರಿ

ಭಾವನೆಗಳೇ ನೀವೇ
ಇರದ ಮೇಲೆ
ಹೇಗೆ ಸಂಭ್ರಮಿಸಳು ಈ ಇಳೆ.... VeErMaHiSuDeEp..


ದಿನಕೊಂದು ಮಾಹಿತಿ..
ಸಿಗದವರನ್ನು ಹುಡುಕಬಾರದು....
ಸಿಕ್ಕವರನ್ನು ಬಿಡಬಾರದು....
ಬಾರದವರಿಗೆ ಕಾಯಬಾರದು....
ಬಂದವರನ್ನು ಕಳಿಸಬಾರದು....
ಕೊಡದವರಲ್ಲಿ ಕೇಳಬಾರದು....
ಕೊಟ್ಟವರನ್ನು ಮರೆಯಬಾರದು....ಶುಭ ದಿನ
2}
ಬದುಕು "ಚೆಲುವಿನ ಚಿತ್ತಾರ" ಆಗದಿರಲಿ....
ಪ್ರೀತಿ "ಮುಂಗಾರು ಮಳೆ" ಆಗದಿರಲಿ....
.ಜೀವನ "ದುನಿಯಾ" ದಂತೆ ಆಗದಿರಲಿ...
ನಿಮ್ಮ ಒಲವುಸ್ನೇಹ ಸದಾ "ಮಿಲನ" ದಂತೆ ನಗುನಗುತಿರಲಿ ...
3}
ಪ್ರೇಮಿಗಳ ದಿನ ಹತ್ತಿರ ಬಂತು ಅದಕ್ಕೊಂದು joke.
ನಲ್ಲ ಹೇಳ್ತಾನೆ ನಲ್ಲೆಗೆ ,
"ನಲ್ಲೆ ನಿನ್ನ ಕೆನ್ನೆ ಮುದ್ದು ಬೆಣ್ಣೆ"
ನಲ್ಲೆ ಹೇಳ್ತಾಳೆ ನಲ್ಲನಿಗೆ ,
"ಹೌದೇ ನಲ್ಲ ?ಹಾಗಿದ್ದರೆ ಮುಟ್ಟದಿರು ನೀ ನನ್ನ ,
ನಿನ್ನ ಕೈಯ ಬಿಸಿ ಸೋಕಿದರೆ ಕರಗಿ ಬಿಟ್ಟೀತು ನನ್ನ ಕೆನ್ನೆ "
ಎಂದು ಹೇಳಿ ದೂರ ಸರಿದಳು ನಲ್ಲೆ .
ನಲ್ಲೆಯ ಮಾತು ಕೇಳಿ ನಲ್ಲನ ಮುಖ
ಬಾಣಲೆಯಲ್ಲಿ ಬೇಯುತ್ತಿರುವ ಬೆಲ್ಲದಂತಾಯಿತು

ನುಡಿ ಮುತ್ತು :
ಯಶಸ್ಸನ್ನು ಗಳಿಸಲು ಇಚ್ಚಿಸುವುದಾದರೆ ಮೊದಲು ನಿಮಗೆ ಪ್ರತಿಕೂಲವಾಗಿರುವ ಅಡ್ಡಿ, ಆತಂಕಗಳನ್ನು ನಿವಾರಿಸಲು ಯತ್ನಿಸಿ.
---ಎಲ್ಲಿಸ್
ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೊ ಕಾಯಿಲೆಗೆ ಪ್ರೀತಿಯೆಂದೆನ್ನಬಹುದೆ
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ
ಮಲಗಿಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ
ಸುಮ್ಮನೆ ಒಳಗೆಅವಳನ್ನೆ ಜಪಿಸುವುದೆ ಒಲವೆ .......

ಸ್ನೇಹಾನ ಪ್ರೀತಿನ..
ಸ್ನೇಹ ಮಾತಾಡುತ್ತೆ,
ಪ್ರೀತಿ ಸುಮ್ಮನಿ,ರುತ್ತೆ,
ಸ್ನೇಹ ನಗಿಸುತ್ತೆ,
ಪ್ರೀತಿ ಅಳಿಸುತ್ತೆ,,
ಸ್ನೇಹ ಸೇರಿಸುತ್ತೆ,
ಪ್ರೀತಿ ದೂರ ಮಾಡುತ್ತೆ,
ಆದರೂ . .
.ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ...............

ನುಡಿಮುತ್ತು..
"ಕಬ್ಬು ಅಗೆದು ತಿನ್ನುವುದು ಪ್ರಕೃತಿ; ಹಿಂಡಿ ರಸ ತೆಗೆದು ಕುಡಿಯುವುದು ಸಂಸ್ಕೃತಿ;ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"— ಡಿ.ವಿ.ಜಿ

ಗೆಳೆತನ ಮಾಡಿದರೆ ನಮಗಿಂತ ಶ್ರೇಷ್ಟರೊಡನೆ ಮಾಡಬೇಕು
ಇಲ್ಲವೇ,,,,,,,,,,,,
ಸಮಾನರೊಡನೆಯಾದರೂ ಮಾಡಬೇಕು ಇವೆರೆಡು
ಸಾಧ್ಯ ಆಗದಿದ್ದಲ್ಲಿ ಎಕಾಂಗಿರುವುದೇ ಲೇಸು.
-ಬುದ್ಧ

ಗೆಳೆಯ
ಬದುಕು ಮುಗಿಯುವ ಮುನ್ನ...
ಹೊತ್ತು ಕಳೆಯುವ ಮುನ್ನ..
ಕನಸು ಕರಗುವ ಮುನ್ನ,,,
ಕಳೆದು ಮರುಗುವ ಮುನ್ನ..
ಹಗಲು ಸರಿಯುವ ಮುನ್ನ..
.ರವಿಯು ಸಾಯುವ ಮುನ್ನ,,,
ನಗುವು ಹೋಗುವ ಮುನ್ನ,,,
ನೋವು ಹೆಚ್ಚುವ ಮುನ್ನ..
ಉಸಿರು ನಿಲ್ಲು ಮುನ್ನ,....
ನೆನಪು ಮಾಸುವ ಮುನ್ನ...
ಹೇಳಿ ಬಿಡು,,,,,, "ನೀ ನನ್ನ ಗೆಳೆಯನೆಂದು

ಕೊಟ್ಟೇವು
ಅಗುಳನ್ನ ಅರಸಿ ಬಂದವರಿಗೆ ಮ್ರಷ್ಟಾನ್ನ ಕೊಟ್ಟೇವು.
ನೀರು ಕೇಳಿ ಬಂದವರಿಗೆ ಪಾನಕ ಕೊಟ್ಟೇವು.
ಪ್ರೀತಿಯನ್ನು ಕೇಳಿ ಬಂದವರಿಗೆ ಪ್ರನವನ್ನೇ ಕೊಟ್ಟೇವು

ಬದುಕಿನ ಒಳಗುಟ್ಟು..
ಬಾಹ್ಯ ಸೌಂದರ್ಯವನ್ನು ಕಂಡು ನೀವು ಇನ್ನೊಬ್ಬರನ್ನು ಪ್ರೀತಿಸುತ್ತೀರಾ...
ನಿಮಗೆ ತಿಳಿದಿರಲಿ...
ಅದು ಮುಂದೊಂದು ದಿನ ಬಾಡಿಹೋಗುತ್ತದೆ...
ಕೊನೆಯಲ್ಲಿ ನೀವು ಬದುಕಬೇಕಾಗುವುದು ಆಂತರಿಕ ಸೌಂದರ್ಯದ ಜೊತೆ ......

ನೆನಪುಗಳು..
ಸಂತೋಷ ಅದಾಗ ನಗು ನಲಿವು ನಾವಿರುವ ಜಾಗವೇ ಸ್ವರ್ಗ.
ದುಖ ಅದಾಗ ಕಣಿರು ನೋವು ನಾವಿರುವ ಜಾಗವೇ ನರಕ.
ಅದೇಗೆಳೆತನದ ಅಧಿಯಲ್ಲಿ ಬರುವದು ಬೇರೆ ಅದುವೆ
ಜೊತೆ ಇದ್ದ ದಿನದ ಮರೆಯಲ್ಗದ ಸವಿ ನೆನಪುಗಳ ಸೂರಿಮಳೆ.
ಈ ನೆನಪುಗಳು ಸದಾ ಅಚ್ಚ ಅಸಿರಗಿರಲಿ ಎಂದು ಅರೈಸುವ .........

No comments: