Tuesday, February 26, 2008

ತೇಪೆ ಬಟ್ಟೆ

ಅಲ್ಲ ನಾ ಬರೆಯ
ಹೊರಟದ್ದು...ಕವನವಲ್ಲ..!!
ಮುರಿದ ಮನೆಗೆ ಹರಿದ ಛಾವಣಿ..
ತೂತ ಮುಚ್ಚಲುತೇಪೆ ಬಟ್ಟೆ.
ಕೆಂಪು,ಹಸಿರು,ಕೇಸರಿ,ನೀಲಿ,
ಬಿಳಿಹೀಗೆ ಹಲವಾರು..
ತೇಪೆ ಬಟ್ಟೆ..
ಯಾರು ಯಾರು ಯಾವ ಕಾಲಕ್ಕೋ
ಹಾಕಿದ ತೇಪೆ..
ಒಮ್ಮೆ ಮಳೆಗೆಒಮ್ಮೆ
ಬಿಸಿಲಿಗೆಮತ್ತೊಮ್ಮೆ ಚಳಿಗೆ.
ಬೆಳಕ ತಡೆಯಬಹುದೇ ??
ಗಾಳಿಯು ಬರಕೂಡದೇ..?
ಸೊಗಸೆನಿಸಿತು ನಾಲ್ವರಿಗೆ,
ಕುರಿಗಳ ಕಾಯ್ವರಿಗೆ.
ಹುರಿದುಂಬಿಸಿದರುಹುರಿದು ತಿಂದರೂ!!
ಕುರಿ ಮಂದೆಯ.
ತೇಪೆಯ ಮೇಲೆ ಮತ್ತೆ
ಅದೇಬಣ್ಣದ ತೇಪೆಗಳು
ಗಾಳಿ,ಬೆಳಕಿಲ್ಲಬೆಳಕ ಕಾಣದವರಿಗೆ
ಕತ್ತಲು ಕಪ್ಪಲ್ಲ..!
ತೇಪೆಯ ಮೇಲೊಂದು
ತೇಪೆ ಬೀಳುತಲೇ ಇರೆತಿರುಗಿತು ತಲೆ,ತೇಪೆಗಲ್ಲ..
ತೇಪೆ ಹಾಕಿಸಿ,ಹಾಕಿದವರಿಗೆ.
ನಮ್ಮ ತೇಪೆಯಲ್ಲವೇ
ಮುರುಕು ಮನೆಗೆ ಸೂರು
ನಮ್ಮ ತೇಪೆಯಲ್ಲವೇ
ಹರುಕು ಛಾವಣಿಗೆ ಶೋಭೆ..!!

ನಿನ್ನ ಮೇಲೊಂದು ಕವನ

ಅರಿಯಲು ಹೊರಟಾಗ ನಿನ್ನ..,
ನಾ ಅರಿತೆ..
ಅರಗಿಸಿಕೊಂಡೆ,
ಹೊಸದೊಂದುಭಾಷೆ,
ಶಬ್ದಕೋಶ.ಬೇಡ ಅಂದದ್ದೆಲ್ಲ
"ಹೌದು"ಹೌದು ಎಂದದ್ದು
"ಹೌದೂ "ನಿನ್ನಿಷ್ಟವೆಂದದ್ದು"ಅಲ್ಲವೇ ಅಲ್ಲ" !!.
ಕಣ್ಣು,ಬಾಯಿ,ಕೈ ಸನ್ನೆ..
ಸನ್ನೆಗಳೋ, ಗರವ ಹಿಡಿಸಿಬಿಡಿಸುವ..
ಬೂದಿ,ಬೇವುಗಳೋ..?
ಹೊಸದು ಲೋಕವುಮರಳುವುದು ಎನಿತು..??

Sangraha

ಭಾವಗಳು...
ಅಗೊಮ್ಮೆ ಈಗೊಮ್ಮೆ
ಹೋಗುತ್ತಿದ್ದ ಭಾವಗಳೇಕೋ
ಮುನಿಸಿಕೊಂಡಂತಿವೆ.

ಇಲ್ಲವೆಂತಿಲ್ಲ, ಬರದೇ ಇರದಂತಿಲ್ಲ !
ಹೇಳಿಯೇ.... ಬರುತ್ತವೆ.
ಬಂದು ಕೂರುವ ಮುನ್ನವೇ
ತಮ್ಮೊಳಗೆ ನಾಲ್ಕು ಮಾತನಾಡಿ
ನನಗೊಂದು ಮಾತ ಹೇಳದೆ
ನಿರ್ಗಮಿಸುತ್ತವೆ.

ಬಿತ್ತುವ ಮುನ್ನ ಉಳುವ ನೆಲವನೋಡುವಂತೆ..
ನನ್ನೆದೆ ಹೊಲವನ್ನೊಮ್ಮೆ ಹೊಕ್ಕು
ಬರಡೆಂದೋ ?,ಫಸಲು ಕಾಣದೆಂದೋ ?
ಹಸನಾದ ನೆಲವನರಸಿ ಹೊರಟಂತಿವೆ.

2} ಒಂದು ಕವನ
ನಿನ್ನ ನೆನಪೇ ..
ಉಸಿರೆಂದು,
ಹಸಿರೆಂದು,
ಹಸಿ,ಹುಸಿಯೇ!
ಗುನು-ಗುನಿಸಿ..
ಜಾರಿದೆರಿ ನಿದಿರೆಯ
ಮಡಿಲಿಗೆ.
ಕನಸಿನಲ್ಲೊಂದುರೂಪ..,
ನಿನ್ನದೇ ಪ್ರತಿ-ರೂಪ.
ಕದ್ದು ಕುಳಿತಿಹುದೋಎಲ್ಲ ಚೆಲುವು..?
ನನ್ನಾಕೆ ಮೊಗವಹೊದ್ದು ತೋರುವುದೋ?
ಸೊಬಗು.
ಕನ-ವರಿಸಿ..,
ಹಿತದೇ ಕಂಪಿಸಿದೆ.

3} ನಾನು
ತಂಪು ಗಾಳಿ,
ಮಬ್ಬುಗತ್ತಲು,
ಮೌನ ನನ್ನ ಅಪ್ಪಿರಲುಪಿಸುಗುಟ್ಟಿತು...
ನೀ ಯಾರು? ಏನಿಲ್ಲಿ ?
ಹುಡುಕಿದೆವು ಜೊತೆಯಾಗಿಬರೆದ ಕತೆ,
ಕವನಗಳಲಿಅಳಿದುಳಿದ ಹಸಿರು ನೋಟುಗಳಲಿ
ಹುಟ್ಟಿ ಬೆಳೆದ ಊರುಗಳಲಿ.
ಬಂಧು-ಬಳಗ,
ಹಿರಿಕಿರಿಯರೆಲ್ಲರದೂಅದೇ ಉತ್ತರ..
ನನ್ನ ನಾಮ.
ನಾಮ ಮತ್ತೊಂದಿರೆಇನ್ನೊಬ್ಬನೇ..?
ಈ ಓದು, ಕೆಲಸವಿರದೆಮತ್ತೊಂದು ವೇಷ.ಗುಣ-ಅವಗುಣ,
ರೂಪಈ ಕ್ಷಣದ ಸತ್ಯ.
ಇರದು, ಇರಲಾರದು.ಇದು ನಾನಾಗಿರಲಾರೆ..!!

4} ದಿಕ್ಕು
ದಾರಿ ಅರಸಿನಿಂತೆ.ನೋಡುತ.....,
ನಾಲ್ಕು ದಿಕ್ಕಿಗೊಂದುಹೆಸರ ದಿಕ್-ಸೂಚಿ.
ಅರಿಯದಾದೆ??ಬಂದದ್ದು ..
ಹೋಗಬೇಕಾದದ್ದು.
ನಿಮಿಷಗಳು ಉರುಳೆ,
(ಹಿಂದಿನಿಂದ ಸದ್ದು)"ಪೀಂ..ಪೀಂ,ಪೀಂ...
"ಕೈಯ ಎತ್ತಿ, ತಲೆಯ ತೂರಿಕೂಗಿತೊಂದು ದನಿ"
ರೀ..!!?, ಹೊರಡ್ರೀ"...
ಬೆಚ್ಚುತ ಹೊರಟೆ.ದಿಕ್ಕೊಂದು ಲೆಕ್ಕವೇ ?
ದಾರಿ ಇರದೆ.

5} ನಕ್ಕುಬಿಡು ....
ನಕ್ಕುಬಿಡು ಸುಮ್ಮನೆಕೂರದೆ ಗುಮ್ಮನೆ.
ನಿಜವಂತೆ... !
ಸ್ನೇಹ, ಪ್ರೀತಿ, ಸಂಬಂಧಇದ್ದ ದಿನಗಳಷ್ಟೇನೋವು, ನಲಿವು.
ಇಲ್ಲದಿರುವುದಕ್ಕೆಇನ್ನಾವ ವ್ಯಥೆಯು ?
ಕಂಡುದುಂಟುಮತ್ತೊಂದು ಕಾರಣ,
ಅಶ್ರುಬಿಂದುನೆಲವನಪ್ಪುವ ಮುನ್ನ.
ನಿನ್ನದೆಂಬುದಾದರುಇದ್ದದ್ದೇನು ?
ಕಳೆದುಕೊಂಡೆನೆನಲುಪಡೆದದ್ದಾದರೇನು ?
ಮರುಗದಿರು..ಮರುಳಾಗುವೆ !
ಮರುಳನಂತೆ ನಕ್ಕುಬಿಡು...
ಹಗುರಾಗುವೆ

Monday, February 25, 2008

Nudi Mathu

ಬೀಜವೊಂದು ಮರದಿಂದ ಬಿದ್ದಾಕ್ಷಣ ಅದು ಅದರ ಕೊನೆಯಲ್ಲ....
ಹೊಸ ಬದುಕಿನ ಆರಂಭ....
ಜೀವನದಲ್ಲಿ ಕೆಳಗೆ ಬಿದ್ದಾಗ ಭಯ ಪಡುವುದು ಬೇಡ....

Mathugalu..

ಮುಗಿಯದಿರಲಿ ಮಾತುಗಳು .....
ಮುಗಿಯದಿರಲಿ ನಿನ್ನ ಮಾತುಗಳು.
ಗೆಳತಿ ನಿನ್ನ ಮಾತುಗಳೇ ನನ್ನಬದುಕಿಗೆ ಗಾಳಿ ....
ನನ್ನ ಹೃದಯದ ಬಡಿತಗಳು .....................
ದ್ವೆಶ್ವದರು ಮಾಡು,
ಪ್ರಿತಿಯದರು ಮಾಡು,
ನಿನ್ನಬದುಕಿನ ಒಂದು ಗಳಿಗೆಯಾದ್ರು ನನ್ನ ನೆನಪು ಮಾಡು.....
ನಿನ್ನ ಚಿತ್ರಕ್ಕೆ ಬಣ್ಣ ತುಂಬಲು ನನ್ನ ನೆತ್ತರದು ಹರಿಯಲಿ ....
ಒಮ್ಮೆ ಮಾತು ಕೊಟ್ಟ ಮೇಲೆ ಈ ಜೀವನ ನಂದಲ್ಲ ನಿಂದು...
ಈಗೋ ನಿನಗೆ ಆರ್ಪಣೆ ...
ನಿನ್ನ ಕವನವು ನನಗೆ ಉದುಗೋರೆಯಲ್ಲ ಗೆಳತಿ ..
ನಾನುನಾನಿಲ್ಲ ನನ್ನದ್ದು ಅನ್ನುವಾದ್ ಏನಿಲ್ಲ
ನಿನ್ನ ನೆರಳಿನಲಿ ನನ್ನ ನಾನು ಮರೆತಿರುವೆ ..
ಸಾಗರದ ನಿರಿಂದ್ ಸಾಗರಕ್ಕೆ ಪೂಜೆ ಸಲ್ಲಿಸುವದು ಬಹುಶ್ ಇದಕ್ಕೆ ಏನೋ...

Sunday, February 24, 2008

Nudi Mathu

ಒಳ್ಳೆಯ ಸಂಬಂಧ ಉತ್ತಮ ತಿಳಿವಳಿಕೆಯನ್ನು ಆಧರಿಸಿರುವುದಿಲ್ಲ....
ಆದರೆ ತಪ್ಪು ತಿಳಿವಳಿಕೆಯನ್ನು ಹೇಗೆ ನಿಭಾಯಿಸುತ್ತೀರೆಂಬುದನ್ನು ಆಧರಿಸಿರುತ್ತದೆ....