Monday, March 3, 2008

Nudi Mathu

ಆಸೆಯೆಂಬುದು ವಿಚಿತ್ರವಾದ ಸಂಕೋಲೆ.
ಆಸೆಯ ಬಂಧನದಲ್ಲಿರುವವರು ಸದಾ ಅತ್ತಿತ ಓಡಾಡುತ್ತಿರುತ್ತಾರೆ,
ಆದರೆ ಬಂಧನದಿಂದ ಬಿಡಿಸಿಕೊಂಡವರು ಒಂದಡೆ ಸ್ಥಿರವಾಗಿ ನಿಲ್ಲುತ್ತಾರೆ........

Nudi Mathu

ನಿಮ್ಮನ್ನು ಪ್ರೀತಿಸುವವರಿಗಿಂತ ಅರ್ಥಮಾಡಿಕೊಲ್ಲುವವರ ಜತೆ ಜೀವನ ಮಾಡಿ....
ಯಾಕೆಂದರೆ ಅರ್ಥಮಾದಿಕೊಳ್ಳುವವರು ಪ್ರೀತಿಸಿಯೇ ಇರುತ್ತಾರೆ....
ಪ್ರೀತಿಸುವವರು ಅರ್ಥ ಮಾಡಿಕೊಳ್ಳದೆ ಇರಬಹುದು

Nudi Mathu

ದೇವರ ಪ್ರೀತಿಯನ್ನು ಗಳಿಸಲು ಸುಲಭವಾದ ಮಾರ್ಗವೊಂದಿದೆ,
ಅದು ದೇವರಿಂದ ಸೃಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುವುದು.... ನಿಜ ತಾನೇ?

Friday, February 29, 2008

Nudi Mathu

ಸಮಸ್ಯಯಿಂದ ದೂರ ಉಳಿಯಲು ಮೌನವೇ ಮದ್ದು....
ಸಮಸ್ಯೆ ಉದ್ಭವಿಸದಂತೆ ಮಾಡಲು ನಗುವೇ ಮದ್ದು....

Wednesday, February 27, 2008

Nudi Mathu

ದುರಾಸೆ ಅನ್ನೋದು ಮನುಷ್ಯನ ಮನಸಿನಲ್ಲಿ ಒಂದು ಗುಣ.
ಅದನ್ನೆಲ್ಲಾ ಒರತು ಪಡಿಸಿ ಬಾಳುವವನೆ ನಿಜವಾದ ಪ್ರಜ್ಞಾವಂತ ಮನುಷ್ಯ.

Nudi Mathu

ಮಾತು ಮಧುರವಾಗಿದ್ದರೆ ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ.
ಮಾತು ಒರಟಾಗಿದ್ದರೆ ದೂರವಿಡುತ್ತಾರೆ.
ಕೋಗಿಲೆಯಿಂದ ಮನುಷ್ಯರಿಗೆ ಏನು ಪ್ರಯೋಜನವಿದೆ?
ಕತ್ತೆ ನಮಗೇನು ಅಪಕಾರ ಮಾಡಿದೆ?
ಕೆಲಸವಾಗಬೇಕಿದ್ದರೆ ಕತ್ತೇ ಕಾಲನ್ನೇ ಹಿಡಯಬೇಕಿಲ್ಲ,
ಮಾತು ಸುಂದರವಾಗಿದ್ದರೂ ಸಾಕು,
ಯಾರನ್ನಾದರೂ ಮೆಚ್ಚಿಸಿ ಎನು ಬೇಕೋ ಅದನ್ನು ಪಡೆಯಬಹುದಲ್ಲವೆ?

ಮನದ ಮಾತು

ಮನದ ಮಾತು….
ಮನ ಒತ್ತಾಯ ಮಾಡಿತು….
ಹಾಳೆಯ ಹೊಲದಲಿ ಭಾವನೆಗಳ ಅಕ್ಷರ ಮಾಡಿ ಬೀಜಗಳ ಬಿತ್ತಲು….
ಮತ್ತದೆ ಮನ ಅಳುಕಿತು….
ಮಾಡಿದ ಒತ್ತಾಯಕೆತನ್ನದೆ ಗೂಡಿನಲ್ಲಿರುವ….
ಭಾವನೆಗಳ ಬುತ್ತಿಯ ಬಿಚ್ಚಲು..