Friday, February 15, 2008

ಕೆಲವು ಸ್ನೇಹಿತರ ಆದುನಿಕ ನುಡಿ ಮುತ್ತು...

ಗಡಿಯಾರ ನಿಜಕ್ಕೂ ಕೋಮುವಾದಿ,ಸಂಪ್ರದಾಯವಾದಿ,ಆಸ್ತಿಕ. ಅದರ ಮುಳ್ಳುಗಳು ಯಾವಾಗಲೂ ಪ್ರದಕ್ಷಿಣೆಯನ್ನೇ ಹಾಕುತ್ತವೆ.
——————————————
ಆಲೋಚನೆಗಳು ಬರೋದು ಕೇವಲ ಯೋಚನೆ ಮಾಡಿದಾಗ ಮಾತ್ರ.
——————————————
ನಿಮ್ಮನ್ನು ಬೇರೆಯವರು ಹೊಗಳಬೇಕೆಂದು ಬಯಸಿದರೆ ನೀವು ಮೊದಲು ಹೊಗಳಬೇಕಾಗುತ್ತದೆ, ಮನಸಾರೆಯಲ್ಲದಿದ್ರೂ ಬಾಯ್ತುಂಬಾನಾದ್ರೂ.
——————————————
ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಒಟ್ಟಿಗೇ ಇರಲೊಲ್ಲವು. ಅದಕ್ಕೇ ಸಾಮಾನ್ಯವಾಗಿ ಹುಡುಗಿಯರು ಎರಡನೆಯದನ್ನು ಮದುವೆ ಸಮಯದಲ್ಲಿ ಮರೆತುಬಿಡುತ್ತಾರೆ. ಇಲ್ಲದಿದ್ದಲ್ಲಿ ಬಹಳಷ್ಟು ಹುಡುಗರು ಅವಿವಾಹಿತರಾಗಿಯೇ ಉಳಿಯಬೇಕಾಗುತ್ತಿತ್ತು.
——————————————
ವಿವಾದಾಸ್ಪದ ವ್ಯಕ್ತಿಗಳನ್ನು ವಿವಾದಗಳಿಂದ ದೂರ ಉಳಿಯದಂತೆ ಮಾಡುವವರನ್ನು ನಿಜವಾದ ಪತ್ರಕರ್ತರೆನ್ನಬಹುದು.
——————————————
ಯಾವ ವಿಷಯವನ್ನು ಕೊಟ್ಟರೂ ಮಾತಾಡಬಲ್ಲವರು ಯಾವ ವಿಷಯವಿಲ್ಲದೆಯೂ ಮಾತಾಡಬಲ್ಲರು.
——————————————
ಸಾಯಬೇಕು ಅಂತಾ ನಿರ್ಧರಿಸಿ ವಿಫಲರಾದವರಲ್ಲಿ ಅನೇಕರು ಸತ್ತಿಲ್ಲ. ಜೈಲು ಸೇರಿದ್ದಾರೆ. ಮತ್ತಿನ್ನೇನು ಬೇಕು?
——————————————
ಬದುಕು ಅರ್ಥಪೂರ್ಣವಾಗಬೇಕಾದರೆ ಮೊದಲು ಬದುಕಿನಲ್ಲಿ “ಅರ್ಥ”ವಿರಬೇಕು.
——————————————
ಬದುಕಿಗೊಂದು ಅರ್ಥ ಇರಬೇಕೆಂದು ಬಯಸುವವರು ಶಬ್ಧ ಕೋಶ ನೋಡಬಹುದು.
——————————————
ಕಾಲೇಜುಗಳಲ್ಲಿ ವಿವಾದ, ಫೇಮಸ್ ಆಗುವುದನ್ನು ಎರಡನ್ನೂ ಬಯಸಿದರೆ ಹುಡುಗಿಯನ್ನು ಪ್ರೀತಿಸಬಹುದು.
——————————————
ಗಾ”ಸಿಪ್ಪು”ಗಳನ್ನು ಬಯಸುವವರು ಹುಡುಗಿಯರನ್ನು ಪ್ರೀತಿಸಬಹುದು. ಆದರೆ ಯಾರನ್ನಾದರೂ ಮದುವೆಯಾದರೆ ಆ ಗಾಳಿಮಾತುಗಳು ಕೇವಲ ಇತಿಹಾಸದ ಪುಟ ಸೇರುತ್ತವೆ. ನಿಜವಾಗಿಯೂ ಪ್ರೀತಿಸಬೇಕಾದ ಅನಿವಾರ್ಯತೆ ಇದ್ದರೆ “ಪ್ರಾಣಿ”ಗಳು ಬಹಳಷ್ಟಿವೆ..!
——————————————
ಮದುವೆ ಮನೆಯಲ್ಲಿ ಊಟಕ್ಕೆ ಎಂದೂ ಸುಂದರ ಹುಡುಗಿ(ಅಥವಾ ಹುಡುಗಿಯರ) ಮುಂದೆ ಕೂರಬಾರದು. ಅತ್ತ ಸೌಂದರ್ಯ ಆಸ್ವಾದನೆಯೂ ಆಗುವುದಿಲ್ಲ. ಇತ್ತ “ಮೃಷ್ಟಾನ್ನ” ಭೋಜನವೂ ಆಗುವುದಿಲ್ಲ.
——————————————
ಉಸಿರುಗಟ್ಟಿಸುವ ವಾತಾವರಣ= ಪಕ್ಷಾಂತರ ಮಾಡಿದ ವ್ಯಕ್ತಿಯಿಂದ ಹಿಂದಿದ್ದ ಪಕ್ಷದ ಬಗೆಗಿನ ಮೊದಲ ಹೇಳಿಕೆ.
——————————————
ಬಹಳಷ್ಟು ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೇ ಇರುವುದರಿಂದ, ಯಾವ ಮಟ್ಟದಲ್ಲಿ ಯಶಸ್ವಿಯಾಗುತ್ತವೋ ಅಷ್ಟು ಮಾತ್ರ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಕು.
——————————————
ರಸ್ತೆ ವಿಭಾಜಕ(dividers)ಗಳಿಲ್ಲದಿದ್ದರೆ ಮೊದಲು ಸಾಯೋರು ವೃತ್ತದಲ್ಲಿರೋ ಪೊಲೀಸರು.
——————————————
ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅಗತ್ಯವಾಗಿ ಮುದ್ರಿಸಬೇಕಾದ ಆಧುನಿಕ ಒಕ್ಕಣಿಕೆ “ಇಲ್ಲಿ ಬರುವ ಪಾತ್ರಗಳು ಕೇವಲ ಕಾಲ್ಪನಿಕ ಮಾತ್ರ. ಇದಕ್ಕೂ ಅವರ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲ.” ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕ”ತಾಳೀ”ಯ ಮಾತ್ರ..!
——————————————
ಕಾರಿನ ಉಪಯೋಗಗಳು
ಕರ್ರಗಿರುವವರು, ತಮ್ಮನ್ನು ತಾವು ಕುರೂಪಿಗಳೆಂದುಕೊಂಡು ಕೀಳರಿಮೆ ಹೊಂದಿರುವವರು ಕಪ್ಪು ಗಾಜಿನ ಹಿಂದೆ ನಿರಾಯಾಸವಾಗಿ ಎಲ್ಲೆಂದರಲ್ಲಿ ತಿರುಗಾಡಬಹುದು.
ಇದರ ಮಹೋನ್ನತ ಪರಮೋದ್ದೇಶ “ತನ್ನನ್ನಿಟ್ಟುಕೊಂಡವರಿಗೆ” ಗೌರವ “ಕಲ್ಪಿಸುವುದು”.
ಕಾರು ಬಹಳಸಲ ಬೇಕೆನ್ನಿಸುವುದು ಮಳೆಗಾಲದಲ್ಲಿ “ನೆನೆಯುತ್ತಿರುವಾಗ” ಮತ್ತು ಬಿರು-ಬಿಸಿಲಲ್ಲಿ ನೆಡೆಯುತ್ತಿರುವಾಗ.
——————————————
ಹುಡುಗರು ಜುಬ್ಬಾ ಧರಿಸಿದಾಗಲೇ ಹುಡುಗಿಯರು ಚೂಡಿದಾರ ಧರಿಸಿದಾಗ ಆಗುವ ತಾಪ”ತ್ರಯ”ಗಳು ಅರ್ಥವಾಗುವುವು.
ಎಲ್ಲೆಂದರಲ್ಲಿ ಕೂಡುವುದು ಕಷ್ಟವಾಗುತ್ತದೆ.
ಗಾಡಿಯ ಮೇಲೆ ಎರಡೂ ಬದಿ ಕಾಲು ಹಾಕಿ ಕೂರುವಾಗ ಬರುವ ಸಂಕಟ.
ಕೆಲವೊಮ್ಮೆ ಪೈ”ಜಾಮ್” ಆಗುವ ಸಂಭವವಿರುತ್ತದೆ…!
——————————————
ಜೊತೆಯಲ್ಲಿ ಮೊಬೈಲಿದ್ದರೆ, ಜೀವನಕ್ಕೆ ಒಂಥರಾ Spice(ಮಸಾಲೆ) ದೊರೆತಂತೆ. ಅದೇ ಜೊತೆಯಲ್ಲಿ ಹುಡುಗಿಯಿದ್ದರೆ, Airtel(ಗಾಳಿಮಾತು)….!
——————————————
ಪ್ರೇಯಸಿ ಸೇವುಪೂರಿ(ಸ್ವಲ್ಪ ಖಾರ) ಹೆಂಡತಿ ಪಾನಿಪೂರಿ(ಸ್ವಲ್ಪ ಹುಳಿ).
——————————————
ತಲೆಯಲ್ಲಿ ಕೂದಲು ಉದುರಲಿಕ್ಕೆ ಪ್ರಾರಂಭಿಸಿದರೆ ಏನಂದುಕೊಳ್ಳಬಹುದು?
ತನಗೂ ತಲೆ ಇದೆ ಅಂದುಕೊಳ್ಳಬಹುದು!
ಉದುರುವ ಮೊದಲು ತನಗೂ ಕೂದಲಿದ್ದವು ಎಂಬ ಗತಕಾಲದ ವೈಭವವನ್ನೂ, ನೆನಪನ್ನೂ ಫ್ಲಾಶ್‌ಬ್ಯಾಕಿನಂತೆ ಸವಿಯಬಹುದು.
ಉದುರಿದ ಪ್ರತಿಯೊಂದು ಕೂದಲು ಉದಾತ್ತ ಚಿಂತನೆಯ ಪ್ರತಿಫಲದ ಪ್ರತೀಕ ಅಂದುಕೊಳ್ಳಬಹುದು!
ತನಗೂ “ಯಜಮಾನಿಕೆ” ಬರುತ್ತಿದೆ ಎಂದುಕೊಳ್ಳಬಹುದು.
ತಮ್ಮ ಹೆಸರಿನ ಮುಂದೆ “ಚಿಂತಕರು”,”ಬುದ್ಧಿ ಜೀವಿಗಳು”,”ಮೇಧಾವಿಗಳು” ಅಂತ ಬರೆಸಿಕೊಳ್ಳಬಹುದು! (ತಲೆಯ ಮೇಲಲ್ಲ)
——————————————
ನಗೆಯು ಮದ್ದು. ಅದಕ್ಕೇ ಅದು ಸಿಡಿಯುತ್ತದೆ!
ನೈತಿಕತೆ ಇಂದು ಬದುಕಿಲ್ಲ ಏಕೆಂದರೆ ಅದರದೇ “ನಿತ್ಯ(ಕೈಲಾಸ)ಸಮಾರಾಧನೆ” ನೆಡೆಯುತ್ತದೆ!
ಮೈ ಮುರಿವಷ್ಟು ಕೆಲಸವಿದ್ದರೆ ಮೈಮುರಿಯುವುದಕ್ಕೆ ಅವಕಾಶವೇ ಸಿಗುವುದಿಲ್ಲ!
—————————————
ಮೊಬೈಲಿಗೂ ಹೊಸಾ ಹೆಂಡತಿಗೂ ಇರುವ ಸಾಮ್ಯಗಳು
ನಮಗೆ ಬೇಡವಾದಗಲೇ ತುಂಬಾ ಶಬ್ಧ ಮಾಡಿ ಕಿರಿಕ್ ಮಾಡುತ್ತವೆ, ಕಾಡುತ್ತವೆ
ಯಾವಾಗಲೂ ಹೃದಯಕ್ಕೆ ಹತ್ತಿರದ ಸ್ಥಳದಲ್ಲೇ ಇರಲು ಬಯಸುತ್ತವೆ
ಮೊದಮೊದಲು ತನ್ನ ಮೇಲೆ ಕೈಹಾಕಿ ಊರೆಲ್ಲಾ ಸುತ್ತಾಡಿಸು ಎನ್ನುತ್ತವೆ.
ಹೊಸತರಲ್ಲಿ ಕಂಡ ಕಂಡವರಿಗೆಲ್ಲಾ ಪರಿಚಯಿಸು ಎನ್ನುತ್ತವೆ.
ತಮ್ಮ ಸೌಂದರ್ಯದ ಗುಣಗಾನ ಮಾಡಬೇಕೆಂದು ಬಯಸುತ್ತವೆ.
ಎರಡನ್ನು ಕೊಂಡಾಗಲೂ ಒಂದೇ ಥರಾ ಅನುಭವಗಳಾಗುತ್ತವೆ. ಸ್ವಲ್ಪ ಕಾದಿದ್ದರೆ ಹೊಸಾ “ಮಾಡೆಲ್” ಸಿಗಬಹುದಿತ್ತೇನೋ.
ಹೆಂಡತಿಯನ್ನು ಮೆಸ್ಸೆಂಜರ್‌ಆಗಿ ಬಳಸಲು ಸಾಧ್ಯವಾಗದವರು ಮೊಬೈಲನ್ನೇ ಹೆಂಡತಿಯಾಗಿ ಬಳಸಬಹುದು.
ನೀವು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದನ್ನು ಬೇರೆಯವರಿಗೆ ತಿಳಿಸಲು ಮೊಬೈಲು ಶುಲ್ಕ ವಿಧಿಸಿದರೆ ಆ ಕೆಲಸವನ್ನ ಹೆಂಡತಿ ಪುಕ್ಕಟೆ ಮಾಡುತ್ತಾಳೆ
—————————————
ನಾನು ಎಲ್ಲರಂತೆ ಸಾಮಾನ್ಯವಾಗಿ ಯೋಚಿಸಿದ್ದರೆ, ಹೀಗೆ ಅಸಾಮಾನ್ಯವಾಗಿ ಯೋಚಿಸಲು ಆಗುತ್ತಿರಲಿಲ್ಲ..!
ಚಿಂತೆಗಳು ಎಂದೂ ಅನಾಥವಲ್ಲ. ನಾವುಗಳೇ ಅವುಗಳಿಗೆ ಅನ್ನದಾತರು..ಸೃಷ್ಟಿದಾತರು!!
ನಾನು ಏಕಾಂತದಲ್ಲಿದ್ದಾಗ ಏಕಾಂಗಿಯಾಗಿರುತ್ತೇನೆ ಮತ್ತು ಒಬ್ಬಂಟಿಯಾಗಿರುತ್ತೇನೆ.
ಏಕಾಂಗಿಯಾಗಿದ್ದಾಗ ಬರುವ ಯೋಚನೆಗಳು ಎಂದೂ ಏಕಾಂಗಿತನ ಅನುಭವಿಸುವುದೇ ಇಲ್ಲ!
-------------------------------------------
ರೂಪಸಿಯಾದ ಹುಡುಗಿಗೂ ಕಿಟಕಿಗೂ ವ್ಯತ್ಯಾಸವೇನು? ಪಕ್ಕದಲ್ಲಿ ಕಿಟಕಿಯಿದ್ದರೆ ನೀವು ಹೊರ ಜಗತ್ತನ್ನು ನೋಡಬಹುದು. ಪಕ್ಕದಲ್ಲಿ ಹುಡುಗಿಯಿದ್ದರೆ, ಹೊರಜಗತ್ತು ನಿಮ್ಮನ್ನು ನೋಡುತ್ತಿರುತ್ತದೆ. ನಿಮಗೆ ಮಾತ್ರ ಹೊರ ಜಗತ್ತು ಮರೆತುಹೋಗುತ್ತದೆ.
——————————————
Love Marriage: marriage ಮುಂಚೆ ಲವ್
Marriage love: marriage ಆದಮೇಲೆ ಲವ್.
ಎರಡಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ.
ಎರಡೂ ಆರಂಭಶೂರತೆಗಳೇ ಎರಡೂ ಅಲ್ಪಾಯುಷಿಗಳೇ!
——————————————
ಮೋರಿ ಮೆಮೋರಿಗೂ ಎರಡೂ ಒಂದೇ ಥರ. ಬೇಡದ್ದೆಲ್ಲವೂ ಅಲ್ಲಿಗೇ ಹೋಗೋದು.
——————————————
ಪಾಸ್‍ಪೋರ್ಟ್ ಸೈಜ್ ಫೋಟೋ ತೆಗೆಸೋಕೆ ಯಾವ ಪ್ಯಾಂಟ್ ಬೇಕಾದ್ರೂ ಹಾಕಿಕೊಂಡು ಹೋಗಬಹುದು!
——————————————
ಡ್ರೈವಿಂಗ್ ಸ್ಕೂಲಿನಲ್ಲಿ ದೇವರ ಫೋಟೊಗಳಿಗಿಂತ ಟ್ರಾಫಿಕ್ ಸಿಗ್ನಲ್‍ಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.
——————————————
ನೀವು ಬರೆದ ಲೇಖನವನ್ನು ಬೇರೆಯವರಿಗೆ ತೋರಿಸುವಾಗ ದುರಾದೃಷ್ಟವೆಂದರೆ ನಿಮ್ಮ ಲೇಖನವನ್ನು ನೀವೇ ಓದುವಂತೆ ನಟಿಸಬೇಕಾಗುತ್ತದೆ.
——————————————
ದೂರದಿಂದ ಸುಂದರಿ “ಎನಿಸುವ” ಹುಡುಗಿ ಹತ್ತಿರದಿಂದಲೂ ಹಾಗೇನೇ ಕಾಣುವುದು ಅಪ”ರೂಪ”.
——————————————
ಮದುವೆ ಆಗುವ ಹುಡುಗಿ “ಮನೆಗೆಲಸ” ಮಾಡಿಕೊಂಡು ಹೋಗಬೇಕೆಂದು ಬಯಸುವವರು ಮನೆಗೆಲಸದವಳನ್ನೇ ಮದುವೆ ಆಗಬಹುದು. ಹಾಗೆಯೇ ತನ್ನನ್ನು ಮದುವೆ ಆಗುವ ಹುಡುಗನಿಗೆ ಅಡುಗೆ ಬರಬೇಕೆಂಬ ಹುಡುಗಿ ಅಡುಗೆ ಭಟ್ಟನನ್ನೇ ಮದುವೆ ಆಗಬಹುದು
___________________________________________________________

Thursday, February 14, 2008

VeErMaHiSuDeEp..

ಬಾಳು
ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯ ಸುಖಿ ನೀನೆನಲು ಒಪ್ಪೇನೆ ?
ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲ್ಲಿ ಚೆಲ್ಲಿ
ಸೂಸುವ ಅಮೃತ ನೀನೇನೆ ನನ್ನ
ಕನಸುಗಳಲ್ಲಿ ಕೈ ಗೊಳ್ಳುವ ಯಾತ್ರೆಯಲ್ಲಿ
ನಿದ್ದಿಸುವ ಧನ್ಯತೆಯ ನಿನೆನೆ ನಿನ್ನ
ಕಿರು ನಗೆಯಿಂದ ನುಡಿಯಿಂದ
ಎತ್ತರದ ಮನೆ ಚಿತ್ರಿಸಿದ್ದೆ ಚೆಳುವಿನುಳ
ಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೆ ....VeErMaHiSuDeEp..

ಸಣ್ಣ ಪ್ರಯತ್ನ..
ಮಿಡಿವ ಮನದ ಆಳ
ಅರಿತು ನಾ ಬರೆಯಬಲ್ಲೆನಾ?
ಮೌನ ವಹಿಸಿ ಕುಳಿತ
ಮನವೇ ಅದಕೇನು ಕಾರಣಾ?

ಬಾಳ ಬಂಡಿ ಎಳೆಯುವಾಗ
ಭಾವನೆಗಳ ಮರೆತೆ
ಮನದ ಬಂಧು,ಕೆಲವು
ಗಳಿಗೆ ಮಾತ್ರ ನಿಮಗೆ ಮಿಸಲಿತೆ..

ಕಾಲ ಕಳೆದು ದೂರ ನಡೆದು
ನಾ ಬಸವಳಿದು ಹೋದೆನು
ಮತ್ತೆ ನಿಮ್ಮ ತೆಕ್ಕೆಯ ಸವಿ
ನೆನೆದು ಮರುಗಿದೆನು
ನಿಲ್ಲಿ,ಎನ್ನ ತೂರೆದು ಹೂಗದಿರಿ

ಭಾವನೆಗಳೇ ನೀವೇ
ಇರದ ಮೇಲೆ
ಹೇಗೆ ಸಂಭ್ರಮಿಸಳು ಈ ಇಳೆ.... VeErMaHiSuDeEp..


ದಿನಕೊಂದು ಮಾಹಿತಿ..
ಸಿಗದವರನ್ನು ಹುಡುಕಬಾರದು....
ಸಿಕ್ಕವರನ್ನು ಬಿಡಬಾರದು....
ಬಾರದವರಿಗೆ ಕಾಯಬಾರದು....
ಬಂದವರನ್ನು ಕಳಿಸಬಾರದು....
ಕೊಡದವರಲ್ಲಿ ಕೇಳಬಾರದು....
ಕೊಟ್ಟವರನ್ನು ಮರೆಯಬಾರದು....ಶುಭ ದಿನ
2}
ಬದುಕು "ಚೆಲುವಿನ ಚಿತ್ತಾರ" ಆಗದಿರಲಿ....
ಪ್ರೀತಿ "ಮುಂಗಾರು ಮಳೆ" ಆಗದಿರಲಿ....
.ಜೀವನ "ದುನಿಯಾ" ದಂತೆ ಆಗದಿರಲಿ...
ನಿಮ್ಮ ಒಲವುಸ್ನೇಹ ಸದಾ "ಮಿಲನ" ದಂತೆ ನಗುನಗುತಿರಲಿ ...
3}
ಪ್ರೇಮಿಗಳ ದಿನ ಹತ್ತಿರ ಬಂತು ಅದಕ್ಕೊಂದು joke.
ನಲ್ಲ ಹೇಳ್ತಾನೆ ನಲ್ಲೆಗೆ ,
"ನಲ್ಲೆ ನಿನ್ನ ಕೆನ್ನೆ ಮುದ್ದು ಬೆಣ್ಣೆ"
ನಲ್ಲೆ ಹೇಳ್ತಾಳೆ ನಲ್ಲನಿಗೆ ,
"ಹೌದೇ ನಲ್ಲ ?ಹಾಗಿದ್ದರೆ ಮುಟ್ಟದಿರು ನೀ ನನ್ನ ,
ನಿನ್ನ ಕೈಯ ಬಿಸಿ ಸೋಕಿದರೆ ಕರಗಿ ಬಿಟ್ಟೀತು ನನ್ನ ಕೆನ್ನೆ "
ಎಂದು ಹೇಳಿ ದೂರ ಸರಿದಳು ನಲ್ಲೆ .
ನಲ್ಲೆಯ ಮಾತು ಕೇಳಿ ನಲ್ಲನ ಮುಖ
ಬಾಣಲೆಯಲ್ಲಿ ಬೇಯುತ್ತಿರುವ ಬೆಲ್ಲದಂತಾಯಿತು

ನುಡಿ ಮುತ್ತು :
ಯಶಸ್ಸನ್ನು ಗಳಿಸಲು ಇಚ್ಚಿಸುವುದಾದರೆ ಮೊದಲು ನಿಮಗೆ ಪ್ರತಿಕೂಲವಾಗಿರುವ ಅಡ್ಡಿ, ಆತಂಕಗಳನ್ನು ನಿವಾರಿಸಲು ಯತ್ನಿಸಿ.
---ಎಲ್ಲಿಸ್
ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೊ ಕಾಯಿಲೆಗೆ ಪ್ರೀತಿಯೆಂದೆನ್ನಬಹುದೆ
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ
ಮಲಗಿಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ
ಸುಮ್ಮನೆ ಒಳಗೆಅವಳನ್ನೆ ಜಪಿಸುವುದೆ ಒಲವೆ .......

ಸ್ನೇಹಾನ ಪ್ರೀತಿನ..
ಸ್ನೇಹ ಮಾತಾಡುತ್ತೆ,
ಪ್ರೀತಿ ಸುಮ್ಮನಿ,ರುತ್ತೆ,
ಸ್ನೇಹ ನಗಿಸುತ್ತೆ,
ಪ್ರೀತಿ ಅಳಿಸುತ್ತೆ,,
ಸ್ನೇಹ ಸೇರಿಸುತ್ತೆ,
ಪ್ರೀತಿ ದೂರ ಮಾಡುತ್ತೆ,
ಆದರೂ . .
.ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ...............

ನುಡಿಮುತ್ತು..
"ಕಬ್ಬು ಅಗೆದು ತಿನ್ನುವುದು ಪ್ರಕೃತಿ; ಹಿಂಡಿ ರಸ ತೆಗೆದು ಕುಡಿಯುವುದು ಸಂಸ್ಕೃತಿ;ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"— ಡಿ.ವಿ.ಜಿ

ಗೆಳೆತನ ಮಾಡಿದರೆ ನಮಗಿಂತ ಶ್ರೇಷ್ಟರೊಡನೆ ಮಾಡಬೇಕು
ಇಲ್ಲವೇ,,,,,,,,,,,,
ಸಮಾನರೊಡನೆಯಾದರೂ ಮಾಡಬೇಕು ಇವೆರೆಡು
ಸಾಧ್ಯ ಆಗದಿದ್ದಲ್ಲಿ ಎಕಾಂಗಿರುವುದೇ ಲೇಸು.
-ಬುದ್ಧ

ಗೆಳೆಯ
ಬದುಕು ಮುಗಿಯುವ ಮುನ್ನ...
ಹೊತ್ತು ಕಳೆಯುವ ಮುನ್ನ..
ಕನಸು ಕರಗುವ ಮುನ್ನ,,,
ಕಳೆದು ಮರುಗುವ ಮುನ್ನ..
ಹಗಲು ಸರಿಯುವ ಮುನ್ನ..
.ರವಿಯು ಸಾಯುವ ಮುನ್ನ,,,
ನಗುವು ಹೋಗುವ ಮುನ್ನ,,,
ನೋವು ಹೆಚ್ಚುವ ಮುನ್ನ..
ಉಸಿರು ನಿಲ್ಲು ಮುನ್ನ,....
ನೆನಪು ಮಾಸುವ ಮುನ್ನ...
ಹೇಳಿ ಬಿಡು,,,,,, "ನೀ ನನ್ನ ಗೆಳೆಯನೆಂದು

ಕೊಟ್ಟೇವು
ಅಗುಳನ್ನ ಅರಸಿ ಬಂದವರಿಗೆ ಮ್ರಷ್ಟಾನ್ನ ಕೊಟ್ಟೇವು.
ನೀರು ಕೇಳಿ ಬಂದವರಿಗೆ ಪಾನಕ ಕೊಟ್ಟೇವು.
ಪ್ರೀತಿಯನ್ನು ಕೇಳಿ ಬಂದವರಿಗೆ ಪ್ರನವನ್ನೇ ಕೊಟ್ಟೇವು

ಬದುಕಿನ ಒಳಗುಟ್ಟು..
ಬಾಹ್ಯ ಸೌಂದರ್ಯವನ್ನು ಕಂಡು ನೀವು ಇನ್ನೊಬ್ಬರನ್ನು ಪ್ರೀತಿಸುತ್ತೀರಾ...
ನಿಮಗೆ ತಿಳಿದಿರಲಿ...
ಅದು ಮುಂದೊಂದು ದಿನ ಬಾಡಿಹೋಗುತ್ತದೆ...
ಕೊನೆಯಲ್ಲಿ ನೀವು ಬದುಕಬೇಕಾಗುವುದು ಆಂತರಿಕ ಸೌಂದರ್ಯದ ಜೊತೆ ......

ನೆನಪುಗಳು..
ಸಂತೋಷ ಅದಾಗ ನಗು ನಲಿವು ನಾವಿರುವ ಜಾಗವೇ ಸ್ವರ್ಗ.
ದುಖ ಅದಾಗ ಕಣಿರು ನೋವು ನಾವಿರುವ ಜಾಗವೇ ನರಕ.
ಅದೇಗೆಳೆತನದ ಅಧಿಯಲ್ಲಿ ಬರುವದು ಬೇರೆ ಅದುವೆ
ಜೊತೆ ಇದ್ದ ದಿನದ ಮರೆಯಲ್ಗದ ಸವಿ ನೆನಪುಗಳ ಸೂರಿಮಳೆ.
ಈ ನೆನಪುಗಳು ಸದಾ ಅಚ್ಚ ಅಸಿರಗಿರಲಿ ಎಂದು ಅರೈಸುವ .........

ವಿಚಿತ್ರ ಪ್ರೇಮ ಪ್ರಸಂಗ...

ವಿಚಿತ್ರ ಪ್ರೇಮ ಪ್ರಸಂಗ...
ಆತ ಆಕೆಯನ್ನು ನೋಡಿದ .ಆಕೆ ಸುಂದರವಾಗಿದ್ದಳು.ಹತ್ತಿರ ಬಂದು ಮುಗುಳುನಕ್ಕ ,ಆಕೆಯೂ ನಕ್ಕಂತೆ ಭಾಸವಾಯಿತು ಆತನಿಗೆ.ಪ್ರೆಮಿಗಳದಿನದಂದು ಮತ್ತೆ ಬಂದ,ಆತ ಹತ್ತಿರ ಬಂದು red rose ಕೊಡಲು ಆಕೆಯ ಮುಂದೆ ಹಿಡಿದು i love you ಎಂದ.'me too,thanx' ಎನ್ನುತ್ತ ಆತನ ರೋಜ್ ತೆಗೆದುಕೊಳ್ಳಲು ಬಂದಳು.'ಆಕಡೆ ಯಾಕೆ ಹೋಗ್ತಿದಿರ ?ನಾನು ನಿಮ್ಮ ಮುಂದೇನೆ ಇದೀನಿ'ಎಂದ.'ಸಾರೀ ನನಗೆ ಕಣ್ಣು ಕಾಣೋದಿಲ್ಲ'ಅಂದಳು .'what?ನಿಮಗೆ ಕಣ್ಣು ಕಾನೋದಿಲ್ವೆ?'ಆತ ಆಕೆಯ ಕೈಗೆ rose ಕೊಟ್ಟು ಹೊರಟು ಹೋದ. ಕುರುಡಿಯನ್ನು ಯಾರು ಪ್ರೀತಿಸ್ತಾರೆ?ಆತ ಮತ್ತೆ ಬಂದ ,ಆಕೆಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋದ ."ಡಾಕ್ಟರ್ ಈಕೆಗೆ ನನ್ನದೊಂದು ಕಣ್ಣು ಜೋಡಿಸಿ ,ಆಕೆಯನ್ನು ತುಂಬಾ ಪ್ರೀತಿಸುತ್ತೇನೆ " ವೈದ್ಯರು ಆತನ ಒಂದು ಕಣ್ಣನ್ನು ಆಕೆಗೆ ಜೋಡಿಸಿದರು.ದ್ರಿಷ್ಟಿ ಪಡೆದ ಆಕೆ'ಅವರೆಲ್ಲಿ ?'ಕೇಳಿದಳು 'ಇವರೆನಮ್ಮ ಅವರು 'ವೈದ್ಯರು ಆತನನ್ನು ತೋರಿಸಿದರು.'what ಅದು ನೀವಾ ? sorry i cant love you.'ಎಂದು ಹೇಳಿ ಆಕೆ ಹೊರಟು ಹೋದಳು.ಯಾಕಿರಬಹುದು? ಆತ ತುಂಬಾ ವಿಕಾರವಾಗಿದ್ದ!,'ಡಾಕ್ಟರ್ ಈ ನನ್ನ ಕಣ್ಣನ್ನು ಆಕೆಗೆ ಜೋಡಿಸಿ' ಅಂದ'ಯಾಕಪ್ಪಾ ನಿನನ್ನು ತಿರಸ್ಕರಿಸಿ ಹೋದವಳಿಗೆ ಎರಡು ಕಣ್ಣನ್ನು ಕೊಡ್ತಿದಿಯ? 'ಯಾಕೆಂದರೆ ಆಕೆ ನನ್ನನ್ನು ತುಂಬಾ ಪ್ರೀತಿಸ್ತಾಳೆ,ಆಕೆಯಲ್ಲಿರುವ ನನ್ನ ಕಣ್ಣು ಮಾತ್ರ ನನ್ನ ಪ್ರೀತಿಯನ್ನು ಗುರುತಿಸಲಿಲ ಅದಕ್ಕಾಗಿ' ಅಂದ.ವೈದ್ಯರು 'love is blind' ಅಂದರು .

Tuesday, February 5, 2008

ಹಳೆಯ ಹನಿಗಳು

ಹಳೆಯ ಹನಿಗಳು
ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ
~~~*~~~
ಚಂದ್ರನ
ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ
~~~*~~~
ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು
~~~*~~~
ಅವಳು
ಒಂದೇ ಸಮನೆ
ಬಿಕ್ಕುತ್ತಿದ್ದಳು;
ಕಾರಣರ್ಯಾರೋ?ಜಾರುವ
ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು...............
...............................................................................
ಕಲ್ಲು ,ಕಲೆ ಮತ್ತು ಅವಳು
ಕಲ್ಲು ಮನಸಿನಲಿ
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!

ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ........
.................................................................
ನಿನ್ನ ಕಂಗಳು
ಬಾನೊಳು ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು........................
,.,.,.,.,..,.,.,.,.,.,.,.,.,..,.,.,.,.,.,.,.,.,..,.,.,.,.,.,.,.,.,...,,.,.,.
ತಿಳಿದಿರಲಿಲ್ಲ
ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು
ದಾಟಿಕದ ಹಿಡಿದು ಹಿಂತಿ
ರುಗಿ ನೋಡುವಾಗ ತಿಳಿದಿರಲಿಲ್ಲ .

ನನಗಂದು ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿಬಿರಿದ
ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು

ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು.......................
,.,.,.,.,.,.,.,.,.,.,.,.,.,.,.,.,.,.,.,.,..,.,.,.,.,..,.,.,.,.,...,.,.,..,.,.,..,,.,,.Hrg
ಕೇಳೇ ನನ್ನವ್ವ
ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ

ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ,
ನನ್ನವ್ವನನ್ ಕೂಡೆ ಭಾರಿ ನಗುತಾವ

ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ

ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,
ನನ್ನವ್ವಹಸಿರಾಗತೈತಿ ನನ ಬಾಳ.............................
,.,.,.,.,.,.,.,.,.,.,.,.,..,.,..,.,.,.,.,.,.,.,.,.,.,.,.,.,.,.,..,.,,.,.,.,.,,.,.,.
ಹಳೆಯ ದಾರಿ
ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದುಬಹು
ದೂರ ಬಂದಾಗಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು......................
ನೆನಪಿನಾಳದಿಂದ ಅಮ್ಮ
ಅಮ್ಮ ಒಬ್ಬಳೇ ಎಲ್ಲರಿಗೂ - ಹಾಗೇ ನನಗೂ
ಅವಳ ನೆನೆಯಲು ಸುಖ ಮಿಶ್ರಿತ ದು:ಖ
ಅವಳು ಹತ್ತಿರ ಸುಳಿಯೇ ಮನಕಾನಂದ
ಜಗದಲಿ ನನಗವಳೇ ಸ್ಫುರದ್ರೂಪಿ

ಅಂದದ ದುಂಡು ಮುಖಕೆ ಅಂಟಿನ ಕುಂಕುಮ
ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ
ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ
ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ

ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ
ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ
ಕೈತುತ್ತ ನೀಡಿ ಅಮೃತ ಉಣಿಸಿದವಳು
ನನ್ನ ಪುಂಡಾಟಿಕೆಯ ಸಹಿಸಿದವಳು

ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು
ಅದರಲಿ ಹಾರ ಮಾಡಲು ಕಲಿಸಿದವಳು
ಎಂದೂ ಕೈ ಚಾಚದಂತಹ ಪಾಠ ಕಲಿಸಿದವಳು
ಇತರರ ನೋವು ನನ್ನದೆಂದು ತೋರಿಸಿದವಳು

ಜೀವನದ ಮರ್ಮ ಅರುಹಿದ ಮಹಾತಾಯಿ
ಪೂಜೆ ಪುನಸ್ಕಾರದ ಪರಿ ಕಲಿಸಿದವಳು
ಇಲ್ಲದಿದ್ದರೂ ಕೊಡುಗೈ ಆಗಿಸಿದವಳು
ನಾನೆಂತು ತೀರಿಸಬಲ್ಲೆ ಆ ನಿನ್ನ ಮಾತೃ ಋಣ

ಅಪ್ಪನ ನೊಗಕೆ ಸಾಟಿಯಾಗಿ ಹೆಗಲು ಕೊಟ್ಟವಳು
ಎಂದಿಗೂ ಮಕ್ಕಳಿಂದ ನಿರೀಕ್ಷಿಸದವಳು
ಕಡುಬಡತನದಲೂ ಬಿಡಲಿಲ್ಲ ಸ್ವಾಭಿಮಾನ
ಲೋಕದಿಂದ ನಮಗೆ ತಂದಿತ್ತ ದೊಡ್ಡ ಬಹುಮಾನ

ನೀನಂದು ನನ್ನ ಬಿಟ್ಟು ಹೋದೆಯಲ್ಲ
ನೀ ಹೀಗೆ ಮೋಸಿಸುವೆಯೆಂದು ನಾ ತಿಳಿದಿರಲಿಲ್ಲ
ಒಂದು ಕ್ಷಣದ ನನ್ನ ಅಚಾತುರ್ಯ
ನೀ ತೀರಿಸಿದೆ ಇಹಲೋಕದ ಕಾರ್ಯ

ಮತ್ತೆ ಹೇಗೆ ನಾ ಸರಿಪಡಿಸಲಿ ನನ್ನ ತಪ್ಪು
ನಾ ನೀಡಲಾರೆನೆ ನಿನಗೊಂದು ಹಿಡಿ ಉಪ್ಪು
ಎಲ್ಲರ ಮನಗಳಲಿ ನಿನ್ನ ಕಾಣುತಿಹೆ
ಎಲ್ಲರಲಿ ನಿನ ಕಂಡು ಋಣ ತೀರಿಸುವೆ........{ವಿಶಾಲ್।}
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ನಾ ಕಂಡ ಹೋಲಿ
ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ
ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು.
ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ದೃಷ್ಯ ಸರ್ವೇ ಸಾಮಾನ್ಯ

ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ?

ಹಬ್ಬ ಬರಲು ಕಾಲೋನಿ ಮಂದಿಯೆಲ್ಲ ಸಂತಸದಿ ನಲಿಯುತಿಹರು
ಹಿರಿಯ ಕಿರಿಯ ಗಂಡು ಹೆಣ್ಣು ಭೇದವಿಲ್ಲದೆ ಕುಣಿಯುತಿಹರು

ಬಣ್ಣಗಳ ಎರಚಿ ಓಕುಳಿಯಲಿ ನಲಿದಾಡಿ
ಕಾಮ ಮದ ಮೋಹ ಸ್ವಾರ್ಥಗಳ ಬದಿಗೊತ್ತಿ
ಬೇಕಿಲ್ಲದ ಪೈಶಾಚೀ ಕೃತ್ಯಗಳ ದಮನಿಸಿ
ಸಮನ್ವಯೀ ಜೀವನಕೆ ದಾರಿ ತೋರಿಪ ಹೋಲಿ

ಮದನನ ಸುಟ್ಟು ಬೂದಿ ಮಾಡಿದ ಮುಕ್ಕಣ್ಣ
ಪ್ರಹ್ಲಾದನ ಸುಡಲು ಹೋದ ಹೋಲಿಕಾಳ ಮದಿಸಿದ ದಿನ
ಪರಮ ಪುರುಷ ಕೃಷ್ಣ ಚೈತನ್ಯರು ಹುಟ್ಟಿದ ದಿನ
ವೃಂದಾವನದಿ ಶ್ರೀ ಕೃಷ್ಣ ನಲಿದ ದಿನ ಈ ಹೋಲಿ

ಆದರೇನು! ಇಂಥ ನಾಡಿನಲಿ ನೋಡುವದೇನು
ಬೀದಿ ಬೀದಿಗಳಲಿ ಪಡ್ಡೆ ಹುಡುಗ ಹುಡುಗಿಯರು
ರುಂಡ ಮುಂಡಗಳಿಗೆ ಬಣ್ಣದ ನೀರು ಸುರುವಿಕೊಂಡು
ಕಾಮ ಮೋಹಗಳ ಪ್ರದರ್ಶಿಸುವ ಈ ದಿನ ಹೋಲಿ {ವಿಶಾಲ್..}
...................................................................................

ಕನಸು
ಕತ್ತಲ ರಾತ್ರಿಯಲಿ,
ಹೊದಿಕೆಯ ಒಳಗೆ
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;

ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,
ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!
ಇಂದಿಲ್ಲಿ ಹಗಲಾಗಿದೆ,
ಕಣ್ಣು ತೆರೆದಿದೆಮನದಲ್ಲಿ
ಹೊಸತು ಕನಸು

ಹೂವಿನ ಹಾದಿಯೇ
ನಿಲ್ಲಹುರುಪು ತುಂಬಿ,
ಛಲವ ಬಿತ್ತಿಮುಂದೆನ್ನ
ಕಥೆ ಬರೆಯುವಸರಳ ಕನಸಷ್ಟೆ!
....................................................................

Monday, February 4, 2008

ನೆನಪು ~~

ನನ್ನ ಬಾಳ ಬೆಳಗುವ
ಬೆಳಕಾಗುವೆಯೆಂದೆ...
ನನ್ನ ಜೀವನದನೆರಳಾಗಿ
ಬರುವೆಯೆಂದೆ...ಆದರೆ..................
ನೆನಪಾಗಿಯೆ ಉಳಿದೆ.....(~_~)
......................................................

॑ಸೋತೆ ॑
ಗೆಳತಿ...ನಾನು SMS
ಕಳುಹಿಸಿ ಕಳುಹಿಸಿ ಸೋತೆ...
ನೀನು SMS ಕಳುಹಿಸದೆ ಸೋತೆ'ಯ?..
ತುಂಡಾಗಬಹುದು ನಮ್ಮೀ
ಸ್ನೇಹದ ಸೇತುವೆ..ಹರಿಯಿಯಬಹುದು ಕಣ್ಣೀರಿನ ಕಾಲುವೆ....(?)
.............................................................

ಜಗದಂಗಳದ
ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ
............................................................

ಬದುಕೊಂದು ಮಾಯಾನಗರಿ,
ಸಹಜ ಕ್ರಿಯೆ, ಹುಟ್ಟು-ಸಾವಿನ ಪರಿ.
ಹುಟ್ಟು-ಸಾವಿನ ನಡುವೆ,ನಮ್ಮದೇ ಆದ ದಾರಿ...!!
ದಾರಿಯೊಳು ಹೂವುಂಟು,
ಹಸಿರುಂಟು,ಬೆಳಕುಂಟು, ನಗುವುಂಟು..!!
ನೋವುಂಟು, ಮುಳ್ಳುಂಟು, ಕಲ್ಲುಂಟು,ನಗೆಯಿರದ ಕ್ಷಣವುಂಟು..!!
ನೂರಾರು ಜನರುಂಟು,ಅವರವರದೆ ಕಥೆಯುಂಟು
................................................................

ನುಡಿಮುತ್ತುಗಳು...
ಪ್ರಿಯತಮನಿಗೆ,ಪ್ರಿಯತಮೆ,
ತುಟಿಗೆ,ತುಟಿ,ತಾಗಿಸಿ,
ಮುತ್ತು ಕೊಡುವಾಗ,ಪ್ರೀತಿಯಿಂದ,
ಉದುರುವ ಮಾತುಗಳು...
...........................................................

"ಪ್ರೀತಿ"ಕಳೆದು ಕೊಂಡರೆ...ವಿರಸಪಡೆದುಕೊಂಡರೆ...ಸರಸ
.........................................................
ಪ್ರೇಮಗೀತೆ .
ನಿನಗಾಗಿನ ಬರೆದೆ ಪ್ರೇಮಗೀತೆ
ಆದರೆ...ಅದು ನಿನಗೆ ತಿಳಿಯದಾಗಿ
ನ ಕಳೆದೆ ಜೀವನವನ್ನುಕೇಳುತ್ತಾ ವಿರಹಗೀತೆ...
ಜಗದಂಗಳದ
ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ

~*~*~*~*~

ನಿದ್ದೆ
ಬಾರದ ರಾತ್ರಿಯಲಿ
ಮನದ ಸೂರ ತುಂಬೆಲ್ಲಾ
ಧಗಧಗಿಸುವ ನಿನ್ನ ನೆನಪಮಳೆ ನಕ್ಷತ್ರಗಳು...!

~*~*~*~*~

ನೀನು ಸಿಗಲಿಲ್ಲವೆಂದು
ಬೇಸರಿಸಿದೆ, ದುಃಖಿಸಿದೆ,
ನಿನ್ನ ನೆನಪಲ್ಲೇ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!


ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿಕಣ್ಣಲ್ಲಿ
ಕಣ್ಣಿಟ್ಟುನೋಡ
ಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದುಅವಳಲ್ಲ...
ಸತ್ತ ಶಾಕುಂತಲೆ ಮತ್ತು ಶೂನ್ಯ.......

- ವಿಮೆ-
ಗೆಳತಿ ನಾ ನಿನ್ನ
ಹಗಲಿರುಳು ಪ್ರೀತಿಸಿ
ಕೊನೆಗೂ ಸೋತೆ
ಆದರೆ...
ನಾ ನಿನ್ನ ಪ್ರೀತಿಗಾಗಿ
ಮಾಡಿಸಿದ್ದರೆ ವಿಮೆ
ವಿಮೆಯ ಹಣದಿಂದ
ಗೆಲ್ಲುತಿರಬಹುದಿತ್ತು....(?)

ನೀ.....ನಾ *-
ನೀ ಲ್ಯಾಪ್ ಟಾಪ್
ಆದರೆನಾ ಕಂಪ್ಯೂಟ
ರ್ನೀ ಡಿ ವಿ ಡಿ ಯಾದರೆ
ನಾ ಆಡಿಯೊ ಕ್ಯಾಸೆಟ್ನೀ
ಲಾಸ್ ವೇಗಸ್ ಆದರೆ
ನಾ ಬಾಂಬೆ ಸಿಟಿ
ನೀ ಹುಣ್ಣಿಮೆಯ ಚಂದಿರ
ವಾದರೆನಾ ಅಮವಾಸ್ಯೆಯ ರಾತ್ರಿ........

ಅಮ್ಮ
ತಾ ಭ್ರೂಣದೊಳು,
ಸಾಕಿ ಬೆಳೆಸಿದೆ ನನ್ನ...
ಅಕ್ಕರೆಯಂ ತೋರಿ,
ಸಕ್ಕರೆಯ,ಸವಿ
ಪಾಕದೊಳಟ್ಟೆ ಎನ್ನ...!!

ನೋವು ನಲಿವುಗಳ ನುಂಗಿ,
ನನ್ನಧೀ ಶಿಶು ಎಂದು,
ಎದೆ ಹಾಲ ನೀ ಗೈದು,ಮುತ್ತಿನಾ..
ಮಳೆ ಸುರಿದು,ಸ್ವರ್ಗದ ಮಡಿಲೊಳಗಿಟ್ಟೆ ಎನ್ನ..!!
ಹೃದಯ ಮಂದಿರದೊಳು,..........

ಬಣ್ಣ.-.ಲಿಫ್ಸ್'ಗೆ
ಲಿಪ್ಸ ಟಿಕ್ ನ ಬಣ್ಣ
ಕೂದಲಿಗೆ ಹೇರ್ ಕಾಲರ್‍‍ನ
ಬಣ್ಣಮುಖ-ಮೈ‍ಗೆ ಕಾಸ್ಮಟಿಕ್‍ಗಳ
ಬಣ್ಣಎಲ್ಲದರಲ್ಲೂ ಬಣ್ಣವೇ
ಬಣ್ಣಹೆಣ್ಣೇ ನಿ ನಿನ್ನ ನಿಜವಾದ ಬಣ್ಣಮರೆತೆಯ......................?